ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಿರಿ

9 Ujjani
Published on

ಉಜ್ಜಿನಿ: ಭರತ ಹುಣ್ಣಿಮೆ ಅಂಗವಾಗಿ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಫೆ.11 ರಿಂದ 13 ರವರೆಗೆ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ಪೊಲೀಸ್ ಹೊರಠಾಣೆಯಲ್ಲಿ ಇಲಾಖೆಯಿಂದ ಭಾನುವಾರ ಶಾಂತಿ ಸಭೆ ನಡೆಸಲಾಯಿತು.

ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ ಮಾತನಾಡಿ, ಭರತ ಹುಣ್ಣಿಮೆ ಅಂಗವಾಗಿ ಉಜ್ಜಿನಿ ಮಹಾಸಂಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನಿಶಾಮಕ ದಳ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಭದ್ರತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಧಕ್ಕೆ ಬಾರದಂತೆ ಜನರು ಸಹಕಾರ ನೀಡಬೇಕು ಎಂದು ಡಿವೈಎಸ್‌ಪಿ ಕೋರಿದರು.

ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ಶಿಂಧೆ, ಒಂಬತ್ತು ಪಾದಗಟ್ಟೆ ಭಕ್ತರು, ಬೆನಕನಹಳ್ಳಿ, ಸೋಮಣ್ಣ, ಕಾಳಾಪುರ ಮಂಜುನಾಥ,ನಡಮಾವಿನಹಳ್ಳಿ ನಾಗರಾಜ ಗೌಡ, ಹಾರಕನಾಳ ಉಜ್ಜಿನಪ್ಪ, ಬೆನಕನಹಳ್ಳಿ ಸಿದ್ದೇಶ, ನಾಗೇನಹಳ್ಳಿ ಸಿದ್ದೇಶ, ಬೆಳದೇರಿ ಬಸಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net