ಕಾನೂನು ಸುರಕ್ಷತಾ ಕ್ರಮ ಪಾಲಿಸಿ

Legal Safety Policy
Legal Safety Policy
Published on

ತೇರದಾಳ: ಅಪ್ರಾಪ್ತ ವಯಸ್ಕರು ಕಾನೂನಿನ ಸುರಕ್ಷತಾ ಕ್ರಮ ಅನುಸರಿಸುವುದರಿಂದ ಅನೇಕ ಅವಘಡಗಳಿಂದ ತಪ್ಪಿಸಿಕೊಂಡು ಬದುಕು ಸುಂದರವಾಗಿಸಿಕೊಳ್ಳಬಹುದು ಎಂದು ನ್ಯಾಯವಾದಿ ವಿನೋದ ಪತ್ತಾರ ವಿದ್ಯಾರ್ಥಿಗಳಿಗೆ ಹೇಳಿದರು.

ಸ್ಥಳೀಯ ದಾನಿಗೊಂಡ ವಾಣಿಜ್ಯ ಹಾಗೂ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು. ಬಾಲ್ಯ ವಿವಾಹ ಕಾಯ್ದೆ ಹಾಗೂ ವ್ಯಸನ ಮುಕ್ತ ಸಮಾಜದ ಕುರಿತಂತೆ ಮಾಹಿತಿ ನೀಡಿದರು.

ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಾಥಿ, ಲೋಕ್ ಅದಾಲತ್ ಮೂಲಕ ಪ್ರತಿಯೊಬ್ಬರಿಗೂ ಶೀಘ್ರವಾಗಿ ಕಾನೂನು ನೆರವು ನೀಡಲು ಸಹಕಾರಿ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಆಯುರ್ವೇದಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ. ಅಪರಾಜ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಪಿಯು ಪ್ರಾಚಾರ್ಯ ಪ್ರಕಾಶ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net