ಕಾನೂನು ಮೀರಿದರೆ ಕಠಿಣ ಕ್ರಮ

klb4
ವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾತನಾಡಿದರು. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ತಿರುಮಲೇಶ ಕುಂಬಾರ ಇದ್ದರು.
Published on

ವಾಡಿ: ಈದ್ ಮಿಲಾದ್, ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸೂಚಿಸಿದರು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಗಣೇಶ ಉತ್ಸವ, ಈದ್ ಮಿಲಾದ್, ಕಲ್ಯಾಣ ಕರ್ನಾಟಕ ಉತ್ಸವ ಏಕಕಾಲಕ್ಕೆ ಬಂದಿದ್ದರಿAದ ಪೊಲೀಸ್ ಇಲಾಖೆಗೆ ಹೆಚ್ಚಿನ ಕಾರ್ಯ ಒತ್ತಡವಿದೆ. ಸಾರ್ವಜನಿಕರು ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು. ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಸಂರಕ್ಷಣೆ ಮಾಡಬೇಕು. ರಾಸಾಯನಿಕ ಬಣ್ಣ ಬಳಸಿದ ಪಿಒಪಿ ಗಣೇಶ ಮೂರ್ತಿಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ನೀರು ವಿಷವಾಗುತ್ತದೆ ಎಂದರು.

ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಗಣಪತಿ ಪ್ರತಿಷ್ಠಾಪಿಸುವವರು ಸಂಬAಧಿಸಿದ ಇಲಾಖೆಗಳಿಂದ ಪೂರ್ವಾನುಮತಿ ಪಡೆಯಬೇಕು. ಮಳೆಗಾಲವಿದ್ದು, ವಿದ್ಯುತ್ ಬಗ್ಗೆ ಜಾಗೃತಿ ವಹಿಸಬೇಕು ಎಂದರು. ಪಿಎಸ್‌ಐ ತಿರುಮಲೇಶ ಕುಂಬಾರ ಮಾತನಾಡಿ, ಪಿಒಪಿ ಗಣೇಶ ಪ್ರತಿಷ್ಠಾಪಿಸಬಾರದು. ಪರಿಸರಕ್ಕೆ ಪೂರಕ ಗಣೇಶ ಪ್ರತಿಷ್ಠಾಪಿಸಬೇಕು. ಅನುಮತಿ ಇಲ್ಲದೆ ಪ್ರತಿಷ್ಠಾಪನೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಅಧಿಕಾರಿ ಬಸವರಾಜ ಪೂಜಾರಿ, ಜೆಸ್ಕಾಂ ಅಭಿಯಂತರ ರಾಜು ಬಿರಾದಾರ, ಮುಖಂಡರಾದ ನಾಗೇಂದ್ರ ಜೈಗಂಗಾ, ವೀರಣ್ಣ ಯಾರಿ, ಬಾಬು ಮಿಯ್ಯಾ, ಸುರ್ಯಕಾಂತ ರz್ದೆವಾಡಿ, ರವಿ ಕಾರಭಾರಿ, ರಾಜು ಮುಕ್ಕಣ, ಮಹ್ಮದ್ ಅಶ್ರಫ್, ಪೃಥ್ವಿರಾಜ್ ಸೂರ್ಯವಂಶಿ, ರಮೇಶ ಬಡಿಗೇರ, ಶರಣಬಸು ಶಿರೂರುಕರ, ರಾಜು ಒಡೆಯರಾಜ, ಸಿದ್ದು ಪೂಜಾರಿ, ರಿಚರ್ಡ್ ಮರೆಡ್ಡಿ, ಸುಶೀಲ ವರ್ಮಾ, ಶಿವಪ್ಪ ಮುಂಡರ್ಗಿ, ರಾಹುಲ ಮೇನಗಾರ, ಜಗತಸಿಂಗ್ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net