ಕಾನೂನು ಪಾಲನೆಗೆ ಆದ್ಯತೆ ನೀಡಿ

GHT
Published on

ಚಿತ್ರದುರ್ಗ: ವಾಹನಗಳಲ್ಲಿ ವಸ್ತುಗಳನ್ನು ಸಾಗಿಸುವ ವೇಳೆ ತಪಾಸಣೆ ಮಾಡುವುದು ಸಹಜ. ಹೀಗಾಗಿ ಅಗತ್ಯ ದಾಖಲೆ, ಪರವಾನಗಿ ಇಟ್ಟುಕೊಳ್ಳಿ. ಕಾನುನು ಪಾಲನೆಗೆ ಮೊದಲ ಆದ್ಯತೆ ನೀಡಿ. ಏನಾದರೂ ಸಮಸ್ಯೆಗಳಿದ್ದಲ್ಲಿ ಖಂಡಿತ ಸ್ಪಂದಿಸುತ್ತೇನೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಹೊರಹೊಲಯದ ರಾಮತೀರ್ಥ ಆಶ್ರಮ ಟ್ರಸ್ಟ್ ಸಮೀಪ ಡಾ.ಬಿ.ಆರ್.ಅಂಬೇಡ್ಕರ್ ಟ್ರ್ಯಾಕ್ಟರ್ ಮಾಲೀಕರ ನೂತನ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಹೆಸರಿನಲ್ಲಿ ಸಂಘ ಕಟ್ಟಿರುವುದು ಸಂತಸದ ವಿಚಾರ. ಅವರನ್ನು ಯಾವ ಜಾತಿಗೂ ಸೀಮಿತಗೊಳಿಸಬಾರದು. ದೇಶದಲ್ಲಿ ಜಾತಿ, ಧರ್ಮ, ಭಾಷೆ ಬೇರೆಯಾದರೂ ಅವರವರ ಸಂಸ್ಕೃತಿ ಆಚರಿಸುವುದರಲ್ಲಿ ತಪ್ಪಿಲ್ಲ. ಸರ್ವರೂ ಸಮಾನತೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು.

ಡಾ. ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿ, ಶ್ರಮಿಕ ವರ್ಗ ದೇಶದ ಬೆನ್ನೆಲುಬಾಗಿದೆ. ಜಾತಿಗಿಂತ ಕಾಯಕ ದೊಡ್ಡದಾಗಿದ್ದು, ಅದರಿಂದ ಸಾಧನೆ ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಬಸವಣ್ಣ ಅವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ. ಟ್ರ್ಯಾಕ್ಟರ್ ಚಾಲನೆ ಕಲಿತರೆ ಹಲವು ವಾಹನಗಳನ್ನು ಸುಲಭವಾಗಿ ಚಲಾಯಿಸಬಹುದು. ಸಂಘಟನೆಗೆ ಈ ಸಂಘ ಮೊದಲ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜ, ಸಂಘದ ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ಶಶಿಧರ, ಖಜಾಂಚಿ ಸ್ವಾಮಿ, ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಮಜೀದ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಜಿ.ಜಯರಾಮರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net