ಕಾನೂನು ಜ್ಞಾನ ಅರಿಯಿರಿ

14 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ತಮ್ಮ ಕಲಿಕೆ ಜತೆಗೆ ಕಾನೂನಿನ ಜ್ಞಾನ ಹೊಂದುವುದು ಭವಿಷ್ಯದ ವೃತ್ತಿಗೆ ಅವಶ್ಯಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂಜಯ ಗುಡಗುಡಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಕೌಸಾಳಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಭವನದಲ್ಲಿ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ 2 ದಿನಗಳ ಪುನಶ್ಚೇತನ ಕಾರ್ಯಾಗಾರ ಸಂಕಲ್ಪ- 2023 ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆ ಜತೆಗೆ ಇತರ ವಿಷಯಗಳ ಜ್ಞಾನ ಹೊಂದುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯ. ಪ್ರತಿಯೊಬ್ಬರು ಕಾನೂನಿನ ಅರಿವು ಮತ್ತು ಮೂಲ ಹಕ್ಕು, ಕರ್ತವ್ಯಗಳ ಕುರಿತು ಜಾಗೃತಿ ಹೊಂದಬೇಕಲ್ಲದೆ, ಯುವ ಸಮುದಾಯ ಕರ್ತವ್ಯ ಮತ್ತು ಹಕ್ಕುಗಳನ್ನು ಪಾಲಿಸಬೇಕು ಎಂದರು.
ಕಾನೂನು ಇರುವುದು ಮನುಷ್ಯನ ರಕ್ಷಣೆಗೆ. ಹೀಗಾಗಿ ವಿದ್ಯಾರ್ಥಿಗಳು ಸಮರ್ಥವಾಗಿ ಕಾನೂನು ಪಾಲಿಸಬೇಕಲ್ಲದೆ, ಉದ್ಯಮ ಸ್ವರೂಪ ಬದಲಾವಣೆ ತಕ್ಕಂತೆ ಪ್ರವೃತ್ತಿ ಬದಲಾಯಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.
ಕೌಸಾಳಿ ನಿರ್ವಹಣಾ ಅಧ್ಯಯನದ ನಿರ್ದೇಶಕ ಡಾ. ಎ.ಎಂ. ಕಡಕೋಳ ಮಾತನಾಡಿ, ನಿರ್ವಹಣೆ ಅಧ್ಯಯನ ಹಲವು ವಿಷಯಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಲಾಜಿಸ್ಟಿಕ್ ಇನ್ ಎಂಬಿಎ ಆರಂಭಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮದೇ ಆದ ಕಲಿಕೆ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು.
ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಉತ್ತಮ ಕಿನಿಂಗೆ, ಡಾ. ಶಿವಪ್ಪ, ಡಾ. ಆರ್.ಆರ್. ಕುಲಕರ್ಣಿ, ಡಾ. ಎನ್. ರಾಮಾಂಜುನಯಲು, ಡಾ. ಅಖಿಲ ಜೋಶಿ, ಡಾ. ಸಾಜಿದ್ ಅಹ್ಮದ್ ಪ್ಯಾರಿ, ಐಶ್ವರ್ಯ ಪವಾಸ್ಕರ, ಸಾಕ್ಷಿ ಕಲಾಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net