ಕಾನೂನಿನ ಅರಿವು ಅಗತ್ಯ

h7-kanakadasa
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು. ಅರಿವಿದ್ದರೆ ಅಪರಾಧಗಳು ಕಡಿಮೆಯಾಗುತ್ತವೆ. ಲೈಸನ್ಸ್ ಇಲ್ಲದೇ ವಾಹನಗಳನ್ನು ಚಲಾಯಿಸಬಾರದು ಎಂದು ಹುಬ್ಬಳ್ಳಿಯ 2ನೇ ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ರಾಘವೇಂದ್ರ ಆರ್. ಹೇಳಿದರು

ಅಖಿಲ ಭಾರತೀಯ ಅದಿವಿಕ ಪರಿಷದ್ ಕರ್ನಾಟಕ ಉತ್ತರ ಹುಬ್ಬಳ್ಳಿ ಮತ್ತು ಕನಕದಾಸ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಕನಕದಾಸ ಶಿಕ್ಷಣ ಸಮಿತಿಯ ಡಾ. ಬಿ.ಎಫ್. ದಂಡಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅವೇರ್ನೆಸ್ ಪ್ರೋಗ್ರಾಂ ಅಬೌಟ್ ಲಾ, ಸಿಎ ಪ್ರೊಫೆಷನ್ ಆನ್ ದಿ ಅಕೇಷನ್ ಆಫ್ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ಡೇ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ದಾರಿ ತಪ್ಪದೇ ತಮ್ಮ ನಿಶ್ಚಲ ಗುರಿಯತ್ತ ಸಾಗಬೇಕು ಎಂದರು.

ಅಖಿಲ ಭಾರತೀಯ ಅದಿವಿಕ ಪರಿಷದ್ ಕರ್ನಾಟಕ ಉತ್ತರ ಹುಬ್ಬಳ್ಳಿಯ ಅಧ್ಯಕ್ಷ ಅಮಿತ ಬಾಬಜಿ ಅವರು ಲೆಕ್ಕಪರಿಶೋಧನೆ, ಎಂ.ಎ. ಲಕ್ಷೆಟ್ಟಿ ಅವರು ಕಾನೂನು ಅರಿವು, ಡಾ. ಸಿ.ಆರ್. ಡವಳಗಿ ಅವರು ಕೌಶಲ ಕುರಿತು, ಹುಬ್ಬಳ್ಳಿ ಸಿಎ ಶಾಖೆಯ ಬಗ್ಗೆ ಸಂಜೀವಕುಮಾರ ಹಾದಿಮನಿ ಮಾತನಾಡಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡಿದರು.

ಯೋಗಿ ದೇವರಾಜ ಯೋಗದ ಅವಶ್ಯಕತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಮಂಜುಳಾ ಪಡೆಸೂರ, ನಾರಾಯಣ ಸಾಳುಂಕೆ, ಸಿಎ ಮಲ್ಲಿಕಾರ್ಜುನ ಪಿಸೆ, ಪ್ರಾಚಾರ್ಯ ಬಿ.ಜಿ. ಮಡ್ಲಿ, ಸಂಜೀವಕುಮಾರ ಹಾದಿಮನಿ, ಶರತಕುಮಾರ, ಶೋಭಾ ಜಾಬಿನ, ಡಾ. ರೂಪಾ ಡವಳಗಿ, ಬೀರೇಶ ತಿರಕಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net