ಕಾನೂನಾತ್ಮಕ ನೆರವಿಗೆ ನಿರ್ಧಾರ

SRI VEER MAHANT SHIVACHARERU PHOTO (2)
Published on

ಕಲಬುರಗಿ: ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿ, ಕಿರುಕುಳ ನೀಡುವ, ಬೆದರಿಸುವ ಪ್ರಯತ್ನಗಳು ನಡೆದಿದ್ದು, ಇದಕ್ಕೆ ತಡೆ ನೀಡಿ ಸಮುದಾಯದವರಿಗೆ ಕಾನೂನು ನೆರವು ನೀಡುವುದು ಸೇರಿ ವಿವಿಧ ವಿಷಯಗಳನ್ನು ವೀರಶೈವ ಲಿಂಗಾಯತ ಯುವ ಸಮ್ಮಿಲನ- ೨ರ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಗತ್ ಬಡಾವಣೆಯ ಬಸವೇಶ್ವರ ಸಮಾಜ ಟ್ರಸ್ಟ್ನ ಅನುಭವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಯುವ ಸಮ್ಮಿಲನ (೨) ಸಭೆಯಲ್ಲಿ ಸಮಾಜದ ಸಂಘಟನೆ ಸೇರಿ ವಿವಿಧ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಮಾಜದ ವ್ಯಕ್ತಿಗೆ ಅನ್ಯಾಯವಾದಾಗ ಬಡವ ಶ್ರೀಮಂತ ಎನ್ನದೆ, ಒಳಪಂಗಡದ ಭೇದವಿಲ್ಲದೆ ಪಕ್ಷಾತೀತವಾಗಿ ಅವರ ಬೆಂಬಲಕ್ಕೆ ನಿಂತು, ನೆರವಿಗೆ ಬರಬೇಕು. ಕಲಬುರಗಿ ನಗರದ ಪ್ರತಿ ವಾರ್ಡ್ಗಳಲ್ಲಿ ಸಮುದಾಯದ ಬಂಧುಗಳನ್ನು ಜೋಡಿಸಿ, ಸಂಘಟನೆ ಮಾಡುವುದು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ನಾಮಕರಣ ಮಾಡಬೇಕು, ಕೇಂದ್ರದಲ್ಲಿ ಓಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸುವ ಹೋರಾಟಕ್ಕೆ ನಿರ್ಣಯಿಸಲಾಯಿತು. ಸಂಘಟನೆ ಬಲಿಷ್ಠಗೊಳಿಸಿದ ನಂತರ ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಹೋರಾಟ ರೂಪಿಸುವ ಕುರಿತು ಚಿಂತನೆ ನಡೆಸಲಾಯಿತು.
ಶ್ರೀ ವೀರ ಮಹಾಂತ ಶಿವಾಚಾರ್ಯರು, ಸುರೇಶ ಟೆಂಗಳಿ, ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಕಲ್ಯಾಣಿ ಕಣ್ಣಿ, ರಾಜು ಭವಾನಿ, ಚಂದ್ರಕಾAತ ಕಾಳಗಿ, ಲಕ್ಷಿö್ಮÃಕಾಂತ ಸ್ವಾದಿ, ಸತೀಶ ಮಾಹೂರ, ಗುರುರಾಜ ಅಂಬಾಡಿ, ಮಾಲಾ ಕಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net