

ಕೊಪ್ಪಳ: ತಾಲೂಕಿನ ಕಾಸನಕಂಡಿ ಬಳಿ ಅರಣ್ಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶುಕ್ರವಾರ ಚಿರತೆ ಬಿದ್ದಿದ್ದು, ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ತುಂಗಭದ್ರಾ ನದಿಗಡ ಹೊಂದಿಕೊಂಡು ಗ್ರಾಮವಿದ್ದು, ಪಕ್ಕದಲ್ಲೇ ಅರಣ್ಯ ಪ್ರದೇಶವಿದೆ. ನಾಲ್ಕೈದು ತಿಂಗಳಿನಿಂದ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಕುರಿ, ದನಗಾಹಿಗಳು ಹಾಗೂ ಇತರೆ ಜನರು ಚಿರತೆ ಫೋಟೋ, ವಿಡಿಯೋ ಸೆರೆ ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಜನರ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಶುಕ್ರವಾರ ಮಧ್ಯಾಹ್ನ ವೇಳೆಗೆ ಚಿರತೆ ಸೆರೆಯಾಗಿದೆ. ನಾಲ್ಕೈದು ತಿಂಗಳಿಂದ ಚಿರತೆ ಅರಣ್ಯದಲ್ಲಿ ವಾಸವಿದ್ದರೂ ಯಾವುದೇ ಮಾನವ, ಜಾನುವಾರುಗಳ ಮೇಲೆ ದಾಳಿ ನಡೆಸಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿದೆ.