

ರಾಣೆಬೆನ್ನೂರ: ಕರೊನಾ ಲಸಿಕೆ ಬರುವುದು ತಡವಾದ ಕಾರಣ ಜನತೆ ಲಸಿಕೆಗಾಗಿ ಬೆಳಗ್ಗೆಯಿಂದ ಮಧ್ಯಾಹ್ನ 12ರವರೆಗೆ ಕಾಯ್ದು ಸುಸ್ತಾದ ಘಟನೆ ಇಲ್ಲಿಯ ಹೆರಿಗೆ ಆಸ್ಪತ್ರೆ ಎದುರು ಮಂಗಳವಾರ ನಡೆಯಿತು.
ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತಿರುವ ಕಾರಣ ನೂರಕ್ಕೂ ಅಧಿಕ ಜನ ಬೆಳಗ್ಗೆ 8 ಗಂಟೆಯಿಂದಲೇ ಆಸ್ಪತ್ರೆಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ನಿತ್ಯವೂ 70 ಜನರಿಗೆ ಮಾತ್ರ ಲಸಿಕೆ ನೀಡುತ್ತಿರುವ ಕಾರಣ ಆಸ್ಪತ್ರೆಗೆ ಬಂದಿದ್ದ 70 ಜನರಿಗೆ ಕೂಪನ್ ನೀಡಲಾಗಿತ್ತು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಕೋವಿಡ್ ಲಸಿಕೆ ಆಸ್ಪತ್ರೆಗೆ ಬರಲೇ ಇಲ್ಲ. ಇದರಿಂದ ರೋಸಿಹೋದ ಜನತೆ ಲಸಿಕೆ ಯಾವಾಗ ಕೊಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಸಮಾಧಾನ ಪಡಿಸಿದರು. ಬಳಿಕ ಹಾವೇರಿಯಿಂದ ಲಸಿಕೆ ಬಂದ ಬಳಿಕ ಎಲ್ಲರಿಗೂ ಲಸಿಕೆ ನೀಡಲಾಯಿತು.