ಕಾತ್ಯಾಯಿನಿ ಅಲಂಕಾರ

kls daeasa
Published on

ಕಳಸ: ಹೊರನಾಡು ಅನ್ನಪೂರ್ಣೇಶ್ವರಿಯನ್ನು ದೇವಿಯ ಏಳನೇ ಅವತಾರ ಮಯೂರಾರೂಢಾ ಕಾತ್ಯಾಯಿನಿ ಅಲಂಕಾರ ಮಾಡಿ ಪೂಜಿಸಲಾಯಿತು.

ಭಾನುವಾರ ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡು ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಸರಸ್ವತಿ ಮೂಲಮಂತ್ರ ಹೋಮ ನಡೆಯಿತು. ಹೋಮದ ಪೂರ್ಣಹುತಿಯನ್ನು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವಿದ್ವಾನ್ ಎಸ್.ಆರ್.ಮಾರುತಿ ಪ್ರಸಾದ್ ಮತ್ತು ತಂಡ ನಾಮ ಸಂಕೀರ್ತನೆ ನಡೆಸಿಕೊಟ್ಟಿತು. ಸಂಜೆ ವಿದುಷಿ ಆರ್.ಪೂರ್ಣಿಮಾ ತಂಡದಿಂದ ಭರತ ನಾಟ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net