ಚಾಮರಾಜನಗರ: ತಾಲೂಕಿನ ಕೋಟಂಬಳ್ಳಿ ಗ್ರಾಮದಲ್ಲಿ ಕಣ್ಣಿನ ಆಪರೇಷನ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಮನೆ ಬಿಟ್ಟು ಹೋದ ವೃದ್ಧ ವಾಪಸ್ ಬಂದಿಲ್ಲ. ಗ್ರಾಮದ ನಿವಾಸಿ ಗುರುಮಲ್ಲೇಗೌಡ(75) 2024ರ ಸೆ.23ರಂದು ಮನೆ ಬಿಟ್ಟು ಹೋದವರು ಇನ್ನೂ ಬಂದಿಲ್ಲ.
ಈ ಸಂಬಂಧ ಗುರುಮಲ್ಲೇಗೌಡ ಸೊಸೆ ಭಾಗ್ಯಮ್ಮ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗುರುಮಲ್ಲೇಗೌಡ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಕೆಂಪು ಮೈ ಬಣ್ಣ, ಬಿಳಿ ತಲೆಗೂದಲು ಹೊಂದಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ದೂ:08226-222243 ಕರೆ ಮಾಡಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.