ಕಾಣಿಕೆ ಪೆಟ್ಟಿಗೆಯಲ್ಲಿ 1.67 ಲಕ್ಷ ರೂ. ಸಂಗ್ರಹ

07 YERRISWAMY 06
Published on

ಬಳ್ಳಾರಿ : ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿನ ದೇವಿ ಮೂರ್ತಿಯ ಮುಂಭಾಗದ ಕಾಣಿಕೆ ಪೆಟ್ಟಿಗೆಯಲ್ಲಿ 1.67 ಲಕ್ಷ ರೂ. ಹಣ ಸಂಗ್ರಹವಾಗಿದೆ. ಆದರೆ, ಹುಂಡಿ ಬಳಿ ಅರತಿ ತಟ್ಟೆ ಇಡುವುದರಿಂದ ಕುಂಕುಮ, ಎಣ್ಣೆ ಹಾಗೂ ನೀರು ಬಿದ್ದು 10,840 ಸಾವಿರ ರೂ. ಹಾಗೂ ಇತ್ತೀಚೆಗೆ ಕೆಲ ದಿನಗಳ ಹಿಂದೆ ಹುಂಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 1,320 ಸುಟ್ಟ ನೋಟಗಳು ಕಂಡು ಬಂದಿದ್ದು, ಒಟ್ಟಾರೆ 12,610 ರೂ. ಅಪಮೌಲ್ಯವಾಗಿವೆ ಎಂದು ದೇವಸ್ಥಾನದ ಇಒ ಹನುಮಂತಪ್ಪ ತಿಳಿಸಿದರು. ಈಗಾಗಲೇ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಅವರಣದಲ್ಲಿ ಹುಂಡಿ ಇಡಲಾಗಿದೆ. ಆದರೆ, ಭಕ್ತರು ಪೂಜೆ ಸಲ್ಲಿಸಿದ ಬಳಿಕ ಅರತಿ ತಟ್ಟೆಯಲ್ಲಿ ಹಾಕುತ್ತಿದ್ದ ಕಾಣಿಕೆಯು ಅರ್ಚಕರ ಪಾಲಗುತ್ತಿತ್ತು ಎಂಬ ಉದ್ದೇಶದಿಂದ ಇಲಾಖೆಯು ಕಳೆದ ಒಂದು ತಿಂಗಳ ಹಿಂದೆ ದೇವಿ ಮೂರ್ತಿ ಬಳಿ ಹೊಸ ಹುಂಡಿ ಇಡಲಾಗಿದೆ ಎಂದು ಮೂಲಗಳು ತಿಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net