ಶಿರಾ: ತಾಲೂಕಿನ ತಿಪ್ಪನಹಳ್ಳಿಯಲ್ಲಿ ಕಾಡು ಹಂದಿ ಬೇಟೆಯಾಡಿ ಸುಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಮಕೂರು ಪ್ರಾದೇಶಿಕ ವಿಭಾಗದ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿದ್ದು, 4 ಕಾಡುಹಂದಿಗಳ ಮೃತದೇಹ ವಶಕ್ಕೆ ಪಡೆದಿದ್ದಾರೆ. ಕಳ್ಳಂಬೆಳ್ಳ ಹೋಬಳಿ ಬೋರಸಂದ್ರ ಗ್ರಾಮದ ಲೋಕೇಶ ಬಂಧಿತ. ಪ್ರಕರಣದಲ್ಲಿ ಭಾಗಿಯಾಗಿದ್ದ ಸಿದ್ದಪ್ಪ, ರಾಮಣ್ಣ, ಅಮಲಗೊಂದಿ ವಡ್ಡರಹಟ್ಟಿ, ರವಿ, ರಮೇಶ, ಮೂರ್ತಿ ದೊಡ್ಡಸಿಬಿ, ರಂಗಯ್ಯ ಬೋರಸಂದ್ರ ಸ್ಥಳದಿಂದ ಪರಾರಿಯಾದ್ದಾರೆ. ಒಂದು ಬೈಕ್, ಮಾಂಸ ಕತ್ತರಿಸಲು ಬಳಸಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರಾ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜಿವಿ (ರಣಾ) ಕಾಯ್ದೆ&1972ರ ಕಲಂ 2(16),9,39,51 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಣಾಧಿಕಾರಿ ಜಿ.ಆರ್ ಶಶಿಧರ ಮಾರ್ಗದರ್ಶನ ಮತ್ತು ಮಧುಗಿರಿ ಉಪ ವಿಭಾಗ ಸಹಾಯಕ ಅರಣ್ಯ ಸಂರಣಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿರಾ ವಲಯ ಅರಣ್ಯಾಧಿಕಾರಿ ಟಿ.ಎನ್.ನವನೀತ್, ಉಪವಲಯ ಅರಣ್ಯಾಧಿಕಾರಿ ನಾಗರಾಜು, ಅರಣ್ಯ ಪಾಲಕ ಟಿ. ನಿಂಗರಾಜು, ಸಿಬ್ಬಂದಿ ನಿಜಲಿಂಗಪ್ಪ ಇದ್ದರು.