ಕಾಡುಸಿಗಸೆಗೆ ತೆರಳಿದ ಕಾಡಾನೆಗಳು

bhr elep
ಬಾಳೆಹೊನ್ನೂರು ಸಮೀಪದ ಮುದುಗುಣಿಯ ತೋಟದಲ್ಲಿ ಕಾಡಾನೆಗಳು ವಿದ್ಯುತ್ ಕಂಬವನ್ನು ತಳ್ಳಿರುವುದು.
Published on

ಬಾಳೆಹೊನ್ನೂರು: ಎರಡು ದಿನಗಳ ಹಿಂದೆ ಬಾಳೆಹೊನ್ನೂರು ಪಟ್ಟಣದಲ್ಲಿ ಬೀಡುಬಿಟ್ಟಿದ್ದ ಎರಡು ಕಾಡಾನೆಗಳು ಶನಿವಾರ ಕೊಪ್ಪ ತಾಲೂಕಿನ ಕಾಡುಸಿಗಸೆ ಗ್ರಾಮಕ್ಕೆ ತೆರಳಿವೆ.

ಕೆಲ ದಿನಗಳ ಹಿಂದೆ ಬಾಳೆಹೊನ್ನೂರು ವ್ಯಾಪ್ತಿಗೆ ಆಗಮಿಸಿ ಕೊಪ್ಪ, ಶೃಂಗೇರಿ ತಾಲೂಕಿನ ವಿವಿಧೆಡೆ ತಿರುಗಾಡಿ ಪುನಃ ಬಾಳೆಹೊನ್ನೂರಿಗೆ ಎರಡು ಕಾಡಾನೆಗಳು ವಾಪಸ್ ಬಂದಿದ್ದವು. ಗುರುವಾರ ರಾತ್ರಿ ಬಾಳೆಹೊನ್ನೂರಿನಿಂದ ಭದ್ರಾ ನದಿಯನ್ನು ದಾಟಿ ಭದ್ರಾ ಎಸ್ಟೇಟ್ ಕಡೆಗೆ ತೆರಳಿದ್ದ ಕಾಡಾನೆಗಳು ಶುಕ್ರವಾರ ಮುದುಗುಣಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದವು.

ಮುದುಗುಣಿ ಗ್ರಾಮದಲ್ಲಿ ಮಂಜುನಾಥ್ ಎಂಬುವರ ತೋಟಕ್ಕೆ ತೆರಳಿವೆ. ತೋಟದಲ್ಲಿ ವಿದ್ಯುತ್ ಕಂಬವನ್ನು ತಳ್ಳಿದ್ದು, ವಿದ್ಯುತ್ ಲೈನ್ ತುಂಡಾಗಿವೆ. ಬಳಿಕ ಶನಿವಾರ ಹಿರೇಗದ್ದೆ ಗ್ರಾಮದ ಕಾಡುಸಿಗಸೆ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ಸ್ಥಳೀಯರಿಗೆ ಕಾಣಿಸಿಕೊಂಡಿವೆ. ಬೇರೆ ಊರಿನಿಂದ ದಾರಿ ತಪ್ಪಿ ಬಂದಿರುವ ಕಾಡಾನೆಗಳು ಹಲವು ದಿನಗಳಿಂದ ಜನ ವಸತಿ ಪ್ರದೇಶದಲ್ಲಿಯೇ ತಿರುಗಾಡುತ್ತಿವೆ. ಆರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಸಫಲವಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net