ಕಾಡುಪ್ರಾಣಿ ಬೇಟೆಯಾಡಿದವರ ಬಂಧನ

20SIRSI2
Published on


ಶಿರಸಿ: ಕಾಡುಕುರಿ ಹಾಗೂ ಬರ್ಕವನ್ನು ಬೇಟೆಯಾಡಿ ಮನೆಯೊಂದರಲ್ಲಿ ಮಾಂಸ ಸಿದ್ಧಪಡಿಸುತ್ತಿದ್ದ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ತಾಲೂಕಿನ ಬಂಡಲದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಬಂಡಲ ಶಿರ್ಲಗದ್ದೆಯ ರಾಮು ಇಟ್ಟು ಮರಾಠಿ, ಗೋಪಾಲ ಇಟ್ಟು ಮರಾಠಿ ಹಾಗೂ ದೇವರಗದ್ದೆಯ ರಮೇಶ ಈಶ್ವರ ಮರಾಠಿ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಂದು ನಾಡಬಂದೂಕು, ಎರಡು ಕತ್ತಿ ಹಾಗೂ ಒಂದು ಹೆಡ್​ಲೈಟ್ ವಶಕ್ಕೆ ಪಡೆಯಲಾಗಿದೆ. ಇವರು ಜಾನ್ಮನೆ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಿನಲ್ಲಿ ಬೇಟೆಯಾಡಿದ್ದು, ಇಲಾಖೆ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರ್​ಎಫ್​ಒ ಪವಿತ್ರ ಯು.ಜೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net