ಕಾಡುಕೋಣ ಗುದ್ದಿ ಮುರಿಯಿತು ಬೈಕ್ ಸವಾರನ ಕೈ!

WEB JOSSS
Published on

ಹೊಸನಗರ: ಸಂಪೇಕಟ್ಟೆ ಸಮೀಪ ಗುರುವಾರ ರಾತ್ರಿ ಮನೆಯಿಂದ ಬೈಕ್‌ನಲ್ಲಿ ಅಂಗಡಿಗೆ ಹೋಗುವ ವೇಳೆ ಕಾಡುಕೋಣ ಗುದ್ದಿ ವ್ಯಕ್ತಿಯೊಬ್ಬರ ಕೈ ಮುರಿದಿದೆ. ಕೃಪಾನಂದ ದೇವರ ಭಟ್ ಗಾಯಾಳು. ಕಟ್ಟಿನಹೊಳೆ ಸಿಂಚನೂರು ನಿವಾಸಿ ಕೃಪಾನಂದ ಸಂಪೇಕಟ್ಟೆಗೆ ಬೈಕ್‌ನಲ್ಲಿ ಬರುವಾಗ ಚಕ್ರಾ ಚಾನಲ್ ಬಳಿ ಕಾಡುಕೋಣ ನುಗ್ಗಿದೆ. ಬೈಕ್‌ಗೆ ಗುದ್ದಿದ ಪರಿಣಾಮ ಪಲ್ಟಿ ಹೊಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಕಾಡುಕೋಣ ಕೃಪಾನಂದನನ್ನು ಚರಂಡಿಗೆ ದೂಡಿದೆ. ಈ ವೇಳೆ ಕೈಮುರಿತಕ್ಕೆ ಒಳಗಾದ ಕೃಪಾನಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕೃಪಾನಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಳವಾರಷ್ಟೆ ಕಾಡುಕೋಣಗಳ ಹಾವಳಿ ಬಗ್ಗೆ ಸ್ಥಳೀಯರು ನಗರ ಅರಣ್ಯ ಕಚೇರಿ ಎದುರು ಪ್ರತಿಭಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net