ಕಾಡುಕೋಣ ಇರಿದು ಮಹಿಳೆಗೆ ಗಾಯ

baffalo
Published on

ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಬೊಗಸೆ ಗ್ರಾಮದಲ್ಲಿ ಕಾಡುಕೋಣ ಮಹಿಳೆಗೆ ಕೊಂಬಿನಿಂದ ಇರಿದು ಗಾಯಗೊಳಿಸಿದೆ.

ಜಾನಕಿ (48) ಕಾಡುಕೋಣ ದಾಳಿಯಿಂದ ಗಾಯಗೊಂಡವರು. ಜಾನಕಿ ಸೋಮವಾರ ಮನೆ ಸಮೀಪದಲ್ಲಿ ನೀರು ಹಿಡಿಯಲು ಹೋದಾಗ ದಿಢೀರಾಗಿ ಕಾಡುಕೋಣ ದಾಳಿ ನಡೆಸಿ ಕೋಡಿನಿಂದ ತಿವಿದಿದೆ. ಜಾನಕಿ ಅವರ ಕಾಲಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಗಾಯಗೊಂಡ ಮಹಿಳೆಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಆರ್‌ಎಫ್‌ಒ ಸಂದೀಪ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net