ಕಾಡು ಹಂದಿ ದಾಳಿಯಿಂದ ಅಪಾರ ಕಬ್ಬು ನಾಶ

sugarcane
Published on

ಹುಲಸೂರು: ಮುಚಳಂಬ ಗ್ರಾಮದ ರೈತರ ಕಬ್ಬಿನ ಗದ್ದೆಗಳಲ್ಲಿ ರಾತ್ರೋ ರಾತ್ರಿ ನೂರಾರು ಕಾಡುಹಂದಿಗಳು ಬಿಡಾರ ಹೂಡಿ ಕಬ್ಬು ನಾಶ ಮಾಡಿವೆ. ಗ್ರಾಮದ ರಮೇಶ ಗುದ್ದೆ, ಮಹಾದೇವ ಗುರಣ್ಣ, ದಿಲೀಪ ಕಾಶಪ್ಪ, ಸತೀಷ ಜ್ಯೋತೆಪ್ಪ, ಸಂತೋಷ ಕಾಮಶೆಟ್ಟಿ ಸೇರಿ ಹಲವು ರೈತರು ಕಬ್ಬು ನಾಶ ಮಾಡಿವೆ. ರೈತರು ಕಬ್ಬು ಉಳಿಸಿಕೊಳ್ಳಲು ವಿವಿಧ ಕಸರತ್ತು ಮಾಡುತ್ತಿದ್ದರೂ ಹಂದಿಗಳ ಉಪಟಳ ನಿಂತಿಲ್ಲ. ಜಿಲ್ಲಾಡಳಿತ ಅವುಗಳನ್ನು ಹಿಡಿದುಕೊಂಡು ಅರಣ್ಯ ಪ್ರದೇಶದಲ್ಲಿ ಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಕಾಡು ಹಂದಿಗಳು ಬೆಳೆಯುವ ಕಬ್ಬು ನಾಶ ಮಾಡುತ್ತಿದ್ದು, ಬೆಳೆ ನಾಶವಾದ ರೈತರನ್ನು ಗುರುತಿಸಿ ಅವರ ಹೊಲದಲ್ಲಿ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಿ ಪ್ರೋತ್ಸಾಹಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net