ಕಾಡು ಪ್ರಾಣಿಗಳ ದಾಳಿಗೆ ಬೆಳೆ ನಾಶ

ldh areaca
ತಿಗಡ ಗ್ರಾಮದಲ್ಲಿ ಅಡಕೆ, ತೆಂಗಿನ ಗಿಡಗಳನ್ನು ಕಾಡು ಪ್ರಾಣಿಗಳು ತಿಂದು, ಮುರಿದು ಹಾಕಿರುವುದು.
Published on

ಲಿಂಗದಹಳ್ಳಿ: ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಜಮೀನಿಗೆ ಕಾಡು ಪ್ರಾಣಿಗಳು ದಾಳಿ ಮಾಡಿ ಅಡಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ತೋಟದ ಬೆಳೆಗಳನ್ನು ತಿಂದು, ತುಳಿದು ಹಾಳುಗೆಡವುತ್ತಿವೆ.

ತಿಗಡ ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ಸಮಯದಲ್ಲಿ ಕಾಡು ಪ್ರಾಣಿಗಳು ಜಮೀನುಗಳತ್ತ ಬರುತ್ತಿವೆ. ಪರಮೇಶ್ವರಪ್ಪ ಎಂಬುವವರು ಬೆಳೆದಿದ್ದ 4-5 ವರ್ಷದ ಅಡಕೆ , ತೆಂಗಿನ ಗಿಡಗಳನ್ನು ಕಾಡು ಪ್ರಾಣಿಗಳು ತಿಂದು, ಮುರಿದು ಹಾಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net