ಕಾಡು ಪ್ರಾಣಿ ಬೇಟೆ ಆಡಿ, ಟಿಕ್​ ಟಾಕ್​ ಮಾಡಿ ಸಿಕ್ಕಿಬಿದ್ದ

17BK2 (1)
Published on

ಬಸವಕಲ್ಯಾಣ: ಕಾಡುಪ್ರಾಣಿ ಬೇಟೆಯಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಘೋಟಾಳ ವಾಡಿಯ ಅಖಿಲೇಶ ಹಾಡೋಳೆ ಬಂಧಿತ. ಈತನಿಂದ ಬೈಕ್ ಮತ್ತು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಲಾಡವಂತಿ ಪ್ರದೇಶದಲ್ಲಿ ಕಾಡು ಹಂದಿ, ಮುಳ್ಳು ಹಂದಿ, ಮೊಲಗಳನ್ನು ಬೇಟೆ ಆಡಿ ವಿಡಿಯೋ ಮಾಡಿ, ಟಿಕ್ ಟಾಕ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ. ಬೀದರ್ ಡಿಸಿಎಫ್ ಶಿವಶಂಕರ, ಎಸಿಎಫ್ ಎ.ಬಿ.ಪಾಟೀಲ್ ಮಾರ್ಗದರ್ಶನ, ಆರ್ಎಫ್ಒ ಮಹೇಂದ್ರ ಮೌರ್ಯ, ಡಿವೈಆರ್ಎಫ್ಒ ಸಂತೋಷ ಯಾಚೆ ಹಾಗೂ ನಿಸಾರ್ ನೇತೃತ್ವದಲ್ಲಿ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಶಾಂತ, ಶಿವಕುಮಾರ, ವೀರಭದ್ರ, ಪ್ರವೀಣ ಹಾಗೂ ಸೂರ್ಯಕಾಂತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net