ಕಾಡು ಪ್ರಾಣಿ ದಾಹ ಇಂಗಿಸಲು ಅರಣ್ಯದಲ್ಲಿ ನೀರಿನ ತೊಟ್ಟಿ

11mnd1
Published on

ಮುಂಡಗೋಡ: ತಾಲೂಕಿನ ವಡಗಟ್ಟಾ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಮತ್ತು ಪಕ್ಷಿಗಳ ನೀರಿನ ದಾಹ ಇಂಗಿಸಲು ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ.

ಅರಣ್ಯದಲ್ಲಿರುವ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಬಾಯಾರಿಕೆ ತೀರಿಸಿಕೊಳ್ಳಲು ನಾಡಿನತ್ತ ಬರುತ್ತಿರುವುದನ್ನು ಕಂಡ ಅರಣ್ಯ ಇಲಾಖೆಯವರು ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ವಿುಸಿದ್ದಾರೆ. ವಡಗಟ್ಟಾ ಗ್ರಾಮದ ಕೆಲವರು ಸಹಕಾರ ನೀಡಿ ತೊಟ್ಟಿಗೆ ನೀರು ಹಾಕಿ ತುಂಬಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net