ಕಾಡಾನೆಗಳಿಂದ ಬಾಳೆ ಫಸಲು ನಾಶ

Published on

ಹನೂರು: ತಾಲೂಕಿನ ಹೂಗ್ಯಂ ಗ್ರಾಮದ ಜಮೀನೊಂದಕ್ಕೆ ಶನಿವಾರ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಬಾಳೆ ಫಸಲನ್ನು ನಾಶಪಡಿಸಿವೆ.

ಗ್ರಾಮದ ಪೆರುಮಾಳ್ ಅವರ ಬಾಳೆ ತೋಟ ಹಾಳು ಮಾಡಿವೆ. ಇನ್ನೇನು ಗೊನೆಗಳು ಕಟಾವಿನ ಹಂತಕ್ಕೆ ಬಂದಿದ್ದವು. ಆದರೆ ತಡರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಗಳು ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಹಾಗೂ ಕಾಡಾನೆಗಳ ಹಾವಳಿ ತಡೆಗೆ ಕ್ರಮಕೈಗೊಳ್ಳಬೇಕು ಎಂದು ರೈತ ಪೆರುಮಾಳ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net