

ಬೇಲೂರು : ತಾಲೂಕಿನ ಬಿಕ್ಕೊಡು ಹಾಗೂ ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಾವಳಿಗೆ ತೋಟ, ಗದ್ದೆ, ಹೊಲಗಳಲ್ಲಿನ ಬೆಳೆ ನಾಶವಾಗುತ್ತಿವೆ. ಸಂಪೂರ್ಣ ಬೆಳೆ ಹಾಳಾಗುವ ಮುನ್ನ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಗಮನ ಹರಿಸಿ ಕಾಡಾನೆಗಳನ್ನು ಶಾಶ್ವತವಾಗಿ ದೂರದ ಕಾಡಿಗೆ ಅಟ್ಟಬೇಕು ಎ.ಬುದು ಹಳ್ಳಿಗರ ಆಗ್ರಹ. ಅದಕ್ಕೆ ತೀವ್ರ ಸ್ಪಂದನೆ ಈಗ ದೊರಕಬೇಕಿದೆ.
ತಾಲೂಕಿನ ಮಲೆನಾಡು ಭಾಗದ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸಂಜೆಯಾಗುತಿದ್ದಂತೆಯೇ ಅಪಕ್ಕಪಕ್ಕದ ಗ್ರಾಮಗಳ ಜಮೀನುಗಳತ್ತ ನುಗ್ಗುತ್ತಿವೆ. ಹಿಂಡು ಹಿಂಡಾಗಿ ದಾಳಿ ಇಟ್ಟು ಬೆಳೆ ನಾಶ ಪಡಿಸುತ್ತಿರುವ 25 ಕ್ಕೂ ಹೆಚ್ಚು ಕಾಡಾನೆಗಳು ಕಳೆದ ತಿಂಗಳು ಬಿಕ್ಕೋಡು ಸಮೀಪದ ಚಿಕ್ಕ ಬಿಕ್ಕೋಡು, ಮತ್ತಾವರ, ಸುಂಡೆಕೆರೆ, ನಿಡುಮನಹಳ್ಳಿ, ಜಗಬೋರನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಂಡಿದ್ದವು. ಸಾಕಷ್ಟು ಬೆಳೆ ನಾಶ ಪಡಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇದೇ ಆನೆಗಳು ಬಿಕ್ಕೋಡು ಹೋಬಳಿಯ ಕೋಗಿಲಮನೆ, ಬೊಮ್ಮಡಿಹಳ್ಳಿ ಮೂಲಕ ಕಸಬಾ ಹೋಬಳಿಯ ಕೊತ್ತನಹಳ್ಳಿ, ಹಿರಿಕೊಲೆ, ಚಿಕ್ಕೋಲೆ, ತಗರೆ ಗ್ರಾಮಗಳ ಜಮೀನುಗಳಿಗೆ ದಾಳಿ ಇರಿಸಿವೆ.
ಒಂದೇ ದಿನ ( ಕಳೆದ ಬುಧವಾರ ರಾತ್ರಿ )25ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಜೋಳ, ರಾಗಿ ಬೆಳೆಯನ್ನು ತಿಂದಿವೆ. ಗದ್ದೆ,ತೋಟದ ಭಾಗ ತುಳಿದು ಲಕ್ಷಾಂತರ ರೂ. ಬೆಲೆಯ ಬೆಳೆ ನಷ್ಟ ಮಾಡಿವೆ. ಎಲೆಂದರಲ್ಲಿ ನುಗ್ಗಿ ಹುಲುಸಾಗಿ ಬೆಳೆದಿದ್ದ ಜೋ