

ಚಿಕ್ಕಮಗಳೂರು: ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದಕ್ಕೆ ಮೊದಲ ಆದ್ಯತೆ ಜೊತೆಗೆ ಆಗಿರುವ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ಕಾಡಾನೆಗಳು ಬೀಡುಬಿಟಿರುವ ಮೂಗ್ತಿಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಕಾಡಾನೆಗಳು ಹಾವಳಿ ಮಾಡಿರುವ ಚಿಕ್ಕಮಗಳೂರು ತಾಲೂಕಿನ ಕೆಸವಿನ ಮನೆ, ಮೆಣಸಿನ ಮಲ್ಲೆದೇವರಹಳ್ಳಿ, ಕದ್ರಿಮಿದ್ರಿ ಮುಂತಾದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ರೈತರಿಗೆ ಆತ್ಮಸ್ಥೆÊರ್ಯ ತುಂಬಿ ಮಾತನಾಡಿದರು.
ಸಕಲೇಶಪುರ, ಬಿಕ್ಕೋಡು ಭಾಗದಿಂದ ೨೨ ಆನೆಗಳ ತಂಡ ಚಿಕ್ಕಮಗಳೂರು ತಾಲೂಕಿಗೆ ಆಗಮಿಸಿದ್ದು, ಈ ಸಂಬAದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆಗಳನ್ನು ಪುನಃ ಅರಣ್ಯಕ್ಕೆ ಓಡಿಸಬೇಕು ಹಾಗೂ ರೈತರಿಗೆ ಬೆಳೆ ಹಾನಿಗೆ ತಕ್ಕಂತೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ಡಿಎಫ್‌ಓ, ಆರ್‌ಎಫ್‌ಓ ಎಸಿಎಫ್, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಿತ ಗ್ರಾಪಂ ಅಧ್ಯಕ್ಷರೊಂದಿಗೆ ಭೇಟಿ ನೀಡಿ ಪರಿಶೀಲಿಸುತ್ತಿz್ದೆÃವೆ. ಈ ಸಂಬAಧ ಕಳೆದ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವರೊಂದಿಗೆ ಎಲ್ಲ ಶಾಸಕರು ಸೇರಿ ಸಭೆ ನಡೆಸಿ ಚರ್ಚಿಸಿz್ದÉÃವೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ೬,೬೫೦ ಆನೆಗಳು ಇವೆ ಎಂದು ಇಲಾಖೆಯ ಮಾಹಿತಿ ಇದೆ. ಈಗ ಆನೆಗಳ ಸಂತತಿ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆನೆ ಕಾರಿಡಾರ್, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕೆಂಬ ಬಗ್ಗೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ಥಾಪಿಸಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವAತೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಬಾರಿ ಕಾಡಾನೆಗಳು ರೈತರು ಬೆಳೆದ ಭತ್ತ, ಅಡಕೆ, ಕಾಫಿ, ಶುಂಠಿ ಮುಂತಾದ ಬೆಳೆಗಳನ್ನು ನಾಶ ಮಾಡಿದ್ದು, ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಕಾಡಾನೆಗಳು ಅರಣ್ಯದಿಂದ ವಲಸೆ ಬರುವುದನ್ನು ತಡೆಯಲು ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ಸಭೆ ನೆಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಆಹಾರ, ಕುಡಿಯುವ ನೀರಿನ ಕೊರತೆಯಿಂದಾಗಿ ಆನೆಗಳು ಸುಲಭವಾಗಿ ನಾಡಿನಲ್ಲಿ ಸಿಗುತ್ತಿರುವ ಕಬ್ಬು, ಬಾಳೆ, ಭತ್ತ ಮುಂತಾದ ಬೆಳೆಗಳನ್ನು ತಿನ್ನಲು ನಾಡಿನತ್ತ ಬರುತ್ತಿವೆ. ಈ ಸಂಬAಧ ಅರಣ್ಯದಲ್ಲಿಯೇ ವನ್ಯ ಜೀವಿಗಳಿಗೆ ಪೂರಕವಾದ ಆಹಾರ ಬೆಳೆಗಳನ್ನು ಬೆಳೆಯಲು ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು.
ಡಿಎಫ್‌ಒ ರಮೇಶ್ ಬಾಬು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಆನೆಗಳು ಜಿಲ್ಲೆಗೆ ಬಂದಿವೆ. ಈಗಾಗಲೇ ಕಳೆದ ಬಾರಿ ಹಾನಿಯಾಗಿದ್ದ ಬೆಳೆ ಪರಿಹಾರವನ್ನು ಸಂಬAದಿಸಿದ ರೈತರ ಖಾತೆಗೆ ಜಮೆ ಮಾಡಲಾಗಿದೆ. ಈಗ ಕಾಡಾನೆಗಳಿಂದ ಆಗಿರುವ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲಿಸುತ್ತಿದ್ದು, ಸರ್ಕಾರದಿಂದ ಹಣ ಬಂದ ತಕ್ಷಣ ಸಂತ್ರಸ್ಥ ರೈತರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದರು.
ಈ ಭಾಗಕ್ಕೆ ಆನೆಗಳು ಹೊಸದಾಗಿ ಬರುತ್ತಿದ್ದು, ಮುಂದೆ ಬರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿz್ದÉÃವೆ. ಡ್ರೋನ್ ಕ್ಯಾಮೆರಾ ಮೂಲಕ ಆನೆಗಳ ಚಲನವಲನದ ಬಗ್ಗೆ ಚಿತ್ರೀಕರಿಸಿ ಮಾಹಿತಿ ಪಡೆಯಲಾಗುತ್ತಿದೆ. ಇದರ ಆಧಾರದ ಮೇಲೆ ಆನೆಗಳು ಜನ ವಸತಿ, ಹಿಡುವಳಿ ಜಮೀನಿಗೆ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದಲ್ಲಿ ಇಲಾಖೆ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮುAದಿನ ವರ್ಷದ ಮಳೆಗಾಲದಲ್ಲಿ ಸಾರಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು ೫೦ ಸಾವಿರ ಬಿದುರು ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಪೂರಕವಾದ ಆಹಾರ ಗಿಡಗಳನ್ನು ಬೆಳೆಯಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು.
ಭದ್ರಾ ಹುಲಿ ಯೋಜನೆ, ಮಸಗಲಿ, ಮುತ್ತೋಡಿ ಅರಣ್ಯ ಪ್ರದೇಶದಿಂದ ನಾಡಿಗೆ ವಲಸೆ ಬಂದಿರುವ ಆನೆಗಳನ್ನು ವಾಪಸ್ ಸ್ಥಳಾಂತರ ಮಾಡಲು ಕಾರ್ಯಾಚರಣೆ ನೆಡೆಸುತ್ತಿರುವ ಜೊತೆಗೆ ಯಾವುದೇ ಸಾವು-ನೋವು ಸಂಬAಧಿಸದAತೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮೂಗ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಉಂಟಾಗಿರುವ ಬೆಳೆ ಹಾನಿಗೆ ತಕ್ಕಂತೆ ರೈತರು ಮತ್ತು ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಮಂತ್, ತಾಲೂಕು ಕೃಷಿ ಅಧಿಕಾರಿ ಸುಜಾತಾ, ಪ್ರಮುಖರಾದ ವಿಕ್ರಾಂತ್ ಮತ್ತಿತರರಿದ್ದರು.