ಕಾಡಾನೆಗಳ ದಾಳಿಗೆ ಭತ್ತದ ಗದ್ದೆ ಹಾನಿ

29bhr 2 web
Published on

ಬಾಳೆಹೊನ್ನೂರು: ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ಬಂಡಿಹೊಳೆ ಕತಗಾರ್​ಬೈಲು ಎಂಬಲ್ಲಿ ಎರಡು ಕಾಡಾನೆಗಳು ಶುಕ್ರವಾರ ರಾತ್ರಿ ಹೊಲಗಳಿಗೆ ನುಗ್ಗಿ ಹಾನಿಗೊಳಿಸಿವೆ. ಕತಗಾರ್​ಬೈಲು ರಮೇಶ್ ಗೌಡ ಎಂಬುವವರ ಭತ್ತದ ಗದ್ದೆಯಲ್ಲಿ ದಾಳಿಯಿಟ್ಟ ಆನೆಗಳು ಫಸಲಿಗೆ ಬಂದಿದ್ದ ಭತ್ತದ ಸಸಿ ತುಳಿದು ನಾಶಪಡಿಸಿವೆ. ಎರಡು ಎಕರೆಗೂ ಅಧಿಕ ಭತ್ತದ ಗದ್ದೆ ಆನೆಗಳ ದಾಳಿಯಿಂದ ಹಾನಿಯಾಗಿದೆ. ರಮೇಶ್ ಗೌಡ ಅವರ ಗದ್ದೆಯನ್ನು ನರಸಿಂಹ ಪೂಜಾರಿ ಎಂಬುವವರು ಗೇಣಿಗೆ ಕೃಷಿ ಮಾಡುತ್ತಿದ್ದಾರೆ. ಆನೆಗಳ ದಾಳಿಯಿಂದ ಗೇಣಿದಾರನಿಗೆ ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net