ಕಾಡಾನೆಗಳ ದಾಳಿಗೆ ಬೆಳೆ ನಾಶ

IMG-20230722-WA0035
Published on

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ನಾಗರಹೊಳೆ ಅರಣ್ಯದಂಚಿನ ದೊಡ್ಡಹರವೆ ಮತ್ತು 11ನೇ ಟಿಬೆಟ್ ಕ್ಯಾಂಪ್‌ನ ಜಮೀನುಗಳಿಗೆ ಶನಿವಾರ ರಾತ್ರಿ ಲಗ್ಗೆ ಇಟ್ಟ ಕಾಡಾನೆಗಳು ರೈತರ ಬೆಳೆ ನಾಶ ಮಾಡಿವೆ.

11ನೇ ಟಿಬೆಟ್ ಕ್ಯಾಂಪ್‌ನ ಸಿರಿಂಗ್ ಎಂಬುವರ ಜಮೀನಿಗೆ ರಾತ್ರಿ ದಾಳಿ ಇಟ್ಟಿರುವ ಆನೆಗಳು ಜೋಳದ ಬೆಳೆ ತಿಂದು, ತುಳಿದಿವೆ. ಕಾಡಿನಿಂದ ಆನೆಗಳು ಹೊರಬರದಂತೆ ಅಳವಡಿಸಿರುವ ಸೋಲಾರ್ ತಂತಿ ಬೇಲಿಯನ್ನು ಆನೆಗಳು ತುಳಿದು ಹಾಳು ಮಾಡಿವೆ. ಅವುಗಳ ದುರಸ್ತಿ ಮಾಡದ ಪರಿಣಾಮ ಪ್ರತಿದಿನ ಆನೆಗಳು, ಕಾಡಿನಿಂದ ರಾತ್ರಿ ವೇಳೆ ಹೊರಬಂದು ಟಿಬೆಟಿಯನ್ ಕ್ಯಾಂಪ್, ದೊಡ್ಡಹರವೆಯ ರೈತರ ಬೆಳೆ ನಾಶ ಮಾಡುತ್ತಿವೆ. ಕೊಪ್ಪ ಉಪವಲಯ ಅರಣ್ಯ ಅಧಿಕಾರಿ ರಾಮು ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net