ಕಾಡಾನೆಗಳ ದಾಳಿಗೆ ಬಾಳೆ ಬೆಳೆ ನಾಶ

IMG_20230105_132802199
Published on

ಹಲಗೂರು: ಸಮೀಪದ ದೊಡ್ಡ ಎಲಚಗೆರೆ ಗ್ರಾಮದ ಬಳಿ ಇರುವ ಎಂ.ಎನ್.ರಾಜು ಎಂಬುವರ ಏಳು ಎಕರೆಯಲ್ಲಿ ಹಾಕಿದ್ದ ಬಾಳೆ ತೋಟಕ್ಕೆ ಬುಧವಾರ ರಾತ್ರಿ ಕಾಡಾನೆಗಳು ನುಗ್ಗಿ ಬೆಳೆಯನ್ನು ನಾಶಪಡಿಸಿದ್ದರಿಂದ ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.


ಮೂಲತಃ ಹಲಗೂರು ಗ್ರಾಮದ ಎಂ.ಎನ್. ರಾಜು ಏಳು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಅದರಲ್ಲಿ ಬಾಳೆ ಬೆಳೆದಿದ್ದರು. ಬುಧವಾರ ರಾತ್ರಿ ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ಬಾಳೆ ಕಂಬವನ್ನು ಮುರಿದು ಅದರ ತಿರುಳನ್ನು ತಿಂದು ಬಾಳೆ ಗೊನೆಗಳನ್ನು ತುಳಿದು ನಾಶಪಡಿಸಿವೆ. ನಮ್ಮ ತೋಟದ ಸುತ್ತ ಕಲ್ಲುಗಳನ್ನು ನೆಟ್ಟಿ ತಂತಿಬೇಲಿ ಹಾಕಿದ್ದು ಅದನ್ನು ಮುರಿದು ಕಾಡಾನೆಗಳು ಒಳ ಪ್ರವೇಶಿಸಿವೆ. ಇದರಿಂದ ನನಗೆ ಸಾಕಷ್ಟು ನಷ್ಟ ಉಂಟಾಗಿದೆ.

ಅರಣ್ಯ ಇಲಾಖೆಯವರು ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಮುಂದೆ ಈ ರೀತಿ ಆಗದಂತೆ ಕ್ರಮವಹಿಸಬೇಕಾಗಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net