ಚಾಮರಾಜನಗರ: ಅನುಮಾನಸ್ಪದವಾಗಿ ಆನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕುಳ್ಳೂರು(ಬೂದಿಪಡಗ ರಂಗಸಂದ್ರ)ದಲ್ಲಿ ನಡೆದಿದೆ.
ಗ್ರಾಮದ ಶಿವರುದ್ರ ಎಂಬವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದ್ದು ಅಂದಾಜು 40-45 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ ಜಮೀನ ಬೆಳೆ ರಕ್ಷಣೆಗೆ ಹಾಯಿಸಿದ್ದ ವಿದ್ಯುತ್ ಪ್ರವಹಿಸಿ ಗಜರಾಜ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಆನೆಗೆ ಉದ್ದದ ದಂತಗಳಿದ್ದು ನೋಡಲು ಬಹಳ ಆಕರ್ಷಕವಾಗಿರುವುದರಿಂದ ಜನರು ಮರುಕಪಡುತ್ತಿದ್ದಾರೆ. ಇನ್ನು, ಸ್ಥಳಕ್ಕೆ ಬಿಆರ್ಟಿ ಡಿಏಫ್ಒ, ಪುಣಜನೂರು ಆರ್ ಎಫ್ ಒ ದೌಡಾಯಿಸಿದ್ದು ಆನೆಯ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.