

ಬಾಳೆಹೊನ್ನೂರು: ಮೂರು ದಿನಗಳಿಂದ ತುಪ್ಪೂರು ಗ್ರಾಮದಲ್ಲಿ ಬೀಡು ಬಿಟ್ಟಿರುವ ಎರಡು ಕಾಡಾನೆಗಳು ಕೃಷಿ ಜಮೀನಿಗೆ ನುಗ್ಗಿ ಹಾನಿ ಉಂಟು ಮಾಡಿವೆ.
ತುಪ್ಪೂರು ಗ್ರಾಮದಲ್ಲಿ ಇತ್ತೀಚೆಗೆ ನಾಟಿ ಮಾಡಿರುವ ಭತ್ತದ ಗದ್ದೆಗೆ ಬಂದಿರುವ ಕಾಡಾನೆಗಳು ಸಸಿಯನ್ನು ತಿಂದು, ತುಳಿದು ಹಾಳುಗೆಡವಿವೆ. ಇದರೊಂದಿಗೆ ಸುತ್ತಮುತ್ತಲಿನ ಕಾಫಿ, ಅಡಕೆ ತೋಟಗಳಲ್ಲಿಯೂ ಸಂಚರಿಸಿ ಹಾನಿ ಮಾಡಿವೆ.