ಕಾಡಾನೆ ದಾಳಿಗೆ ಹೆದರಿ ಓಡುವಾಗ ಬಿದ್ದು ವ್ಯಕ್ತಿಗೆ ಗಾಯ

kadane dalige gaya
Published on

ಕೊಡಗು: ಸಿದ್ದಾಪುರದ ಅವರೆಗುಂದ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ವ್ಯಕ್ತಿಯೊಬ್ಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರೆಗುಂದ ಗ್ರಾಮ ನಿವಾಸಿ ರಘು (35) ಮತ್ತು ಗಣೇಶ್ ಅವರು ಸಮೀಪದ ಅರಣ್ಯ ಪ್ರದೇಶದೊಳಗೆ ಸೌದೆ ತರಲೆಂದು ಹೋಗಿದ್ದಾಗ ಕಾಡಾನೆ ದಿಢೀರ್ ಎದುರಾಗಿದ್ದು ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ರಘು ನೆಲಕ್ಕೆ ಬಿದ್ದ ಪರಿಣಾಮ ಕುತ್ತಿಗೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಗಣೇಶ ಎಂಬುವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಗಾಯಗೊಂಡಿರುವ ರಘು ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಚಿಕಿತ್ಸೆ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net