ಕಾಡಾನೆ ದಾಳಿಗೆ ಬೆಳೆ ನಾಶ

31 web
Published on

ಕೈಲಾಂಚ : ಹೋಬಳಿಯ ಗುನ್ನೂರು ಗ್ರಾಮದಲ್ಲಿ ಮೂರು ಆನೆಗಳು ಮಂಗಳವಾರ ರಾತ್ರಿ ಭತ್ತದ ಬೆಳೆ ನಾಶ ಪಡಿಸಿವೆ. ಕಾವೇರಿ ವನ್ಯಜಿವಿಧಾಮದಿಂದ ಬಂದಿರುವ ಆನೆಗಳ ಹಿಂಡು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಬಂದು ವಿಭೂತಿಕೆರೆ ಅಂಜನಾಪುರ ಮುಖಾಂತರ ಅಚ್ಚಲು ಅರಣ್ಯಕ್ಕೆ ಮಂಗಳವಾರ ಬಂದಿದ್ದ ಆನೆಗಳು ವಾಪಸ್​ ಸ್ವಸ್ಥಾನಕ್ಕೆ ಹೋಗದೆ, ಹುಣಸನಹಳ್ಳಿ ಬಳಿ ಅರ್ಕಾವತಿ ನದಿ ದಾಟಿ ನಾಗೋಹಳ್ಳಿ, ವಡ್ಡರಹಳ್ಳಿ ಮುಖಾಂತರ ಗುನ್ನೂರು ಗ್ರಾಮದ ಕಡೆ ಬಂದು ಭತ್ತದ ಫೈರು ನಾಶ ಮಾಡಿ ಗುನ್ನೂರು ಅರಣ್ಯದತ್ತ ಸಾಗಿವೆ.

ಕಳೆದ ವಾರ ಹಂದಿಗೊಂದಿಯಿಂದ ಸ್ವಸ್ಥಾನದ ಕಡೆ ಆನೆಗಳನ್ನು ಕಾರ್ಯಾಚರಿಸಲಾಗಿತ್ತು. ಮತ್ತೆ ಆನೆಗಳು ವಾಪಸ್​ ಬಂದಿವೆ. ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದು, ಈಗಾಗಲೇ ಅವುಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಂಡಿದ್ದು, ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸಲಾಗುತ್ತದೆ. | ಮಹಮ್ಮದ್​ ಮನ್ಸೂರ್​ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net