ಕಾಡಾನೆ ದಾಳಿಗೆ ಉರುಳಿದ ತೆಂಗಿನ ಮರಗಳು

31hgr 1
Published on

ಹಲಗೂರು: ಸಮೀಪದ ನಂದಿಪುರ ಗ್ರಾಮದ ಜಯರಾಮ ಅವರ ಜಮೀನಿಗೆ ಭಾನುವಾರ ರಾತ್ರಿ ಎರಡು ಕಾಡಾನೆಗಳು ದಾಳಿ ಮಾಡಿ ಎರಡು ತೆಂಗಿನ ಮರಗಳನ್ನು ಉರುಳಿಸಿವೆ. ಜತೆಗೆ ಜಮೀನಿನಲ್ಲಿ ಬೆಳೆದಿದ್ದ ಫಸಲುಗಳನ್ನು ತುಳಿದು ನಾಶಪಡಿಸಿವೆ. ಕಾಡಾನೆ ದಾಳಿಯಿಂದ ತಮಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಜಯರಾಮ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net