ಕಾಡಾನೆ ದಾಳಿ, ಭತ್ತದ ಬಣವೆಗೆ ಹಾನಿ

20mnd1(B)
Published on

ಮುಂಡಗೋಡ: ತಾಲೂಕಿನ ಕಾತೂರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡು ಬುಧವಾರ ರಾತ್ರಿ ದಾಳಿ ನಡೆಸಿ ರೈತರ ಭತ್ತದ ಕಾಳಿನ ಹುಲ್ಲಿನ ಬಣವೆ ಮತ್ತು ಭತ್ತದ ಬೆಳೆಯನ್ನು ತಿಂದು ತುಳಿದು ಹಾನಿ ಮಾಡಿವೆ. ಹನುಮಾಪುರ ಗ್ರಾಮದ ಫಕೀರಪ್ಪ ಹರಿಜನ ಎಂಬ ರೈತನ ಭತ್ತದ ಕಾಳಿನ ಹುಲ್ಲಿನ ಬಣವೆ ಹಾಗೂ ಪಕ್ಕದ ಭತ್ತದ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ತಿಂದು ತುಳಿದು ಹಾನಿ ಮಾಡಿವೆ. ಒಟ್ಟು 13 ಕಾಡಾನೆಗಳಿದ್ದು ಒಂದು ಗುಂಪಿನಲ್ಲಿ 6, ಮತ್ತೊಂದು ಗುಂಪಿನಲ್ಲಿ 7 ಇವೆ. ಕಳೆದ ವರ್ಷ ಈ ವೇಳೆಯಲ್ಲಿ ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದ್ದವು. ಈ ಬಾರಿ ಈ ಭಾಗಕ್ಕೆ ತಡವಾಗಿ ಕಾಡಾನೆಗಳ ಹಿಂಡು ಬಂದಿದೆ. ಕೆಲವು ರೈತರು ಕಳೆದ ವರ್ಷ ಕಾಡಾನೆಗಳಿಂದ ತಮ್ಮ ಬೆಳೆ ಹಾನಿಯಾಗಿದ್ದರಿಂದ ಈಗಾಗಲೇ ತಮ್ಮ ಬೆಳೆಗಳನ್ನು ಕಟಾವು ಮಾಡಿಕೊಂಡಿದ್ದು ಬೆಳೆ ಹಾನಿ ಕಡಿಮೆಯಾಗಿದೆ ಎಂದು ಕಾತೂರ ಆರ್​ಎಫ್​ಒ ಅಜಯ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net