ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ನೈತಾಳಪುರ ಗ್ರಾಮದಂಚಿನ ಕೃಷಿ ಜಮೀನಿಗೆ ಕಾಡಾನೆ ನುಗ್ಗಿ ಬೆಳೆ ನಾಶ ಮಾಡಿದ್ದಲ್ಲದೆ ಟ್ರಾೃಕ್ಟರ್ ಜಖಂಗೊಳಿಸಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ನೈತಾಳಪುರ ಗ್ರಾಮದಂಚಿನಲ್ಲಿರುವ ನಟರಾಜನ್ ಅವರಿಗೆ ಸೇರಿದ ಕೃಷಿ ಜಮೀನಿಗೆ ಕಾಡು ಆನೆಯೊಂದು ನುಗ್ಗಿ ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ. ಇದನ್ನು ಕಂಡ ರೈತರು ಟ್ರ್ಯಾಕ್ಟರ್ ಮೂಲಕ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ, ಆನೆ ಆಕ್ರಮಣಕಾರಿಯಾಗಿ ನುಗ್ಗಿ ಟ್ರಾೃಕ್ಟರ್‌ಗೆ ಹಾನಿ ಮಾಡಿತು. ಈ ಘಟನೆಯಿಂದ ರೈತರನ್ನು ಭಯಭೀತಗೊಳಿಸಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಿ, ಆನೆಗಳು ಕೃಷಿ ಭೂಮಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.