ಕಾಡಾನೆ ದಾಳಿ: ಬಾಳೆ ತೋಟ ನಾಶ

RPT WEEEEEBBB
Published on

ರಿಪ್ಪನ್‌ಪೇಟೆ: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ‌್ಲಿಗೆ ಗ್ರಾಮದ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆ ಬೆಳೆ ಹಾನಿ ಮಾಡಿದೆ. ಕಳೆದೆ ಎರಡು ಮೂರು ದಿನಗಳಿಂದ ನೇರ‌್ಲಿಗೆ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡಾನೆಗಳು ಗುರುವಾರ ರಾತ್ರಿ ರೈತ ನಾಗಪ್ಪ ಅವರ ಜಮೀನಿಗೆ ನುಗ್ಗಿ 2 ಎಕರೆ ಬಾಳೆ ಬೆಳೆ ಹಾನಿಮಾಡಿದೆ. ಕಳೆದ ಸಾಲಿನ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಅರಸಾಳು, ಬೆಳ್ಳೂರು, ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಹತ್ತಾರು ರೈತರ ಜಮೀನುಗಳಿಗೆ ನುಗ್ಗಿ ಬಾಳೆ, ಅಡಕೆ, ಕಬ್ಬು, ತೆಂಗು ಇತರ ಬೆಳೆಗಳಿಗೆ ಹಾನಿ ಮಾಡಿದ್ದವು. ಕಾಡಾನೆ ದಾಳಿಯಿಂದ ಜನ ಹಾಗೂ ಬೆಳೆಗಳನ್ನು ರಕ್ಷಿಸುವಂತೆ ರೈತರ ಆಗ್ರಹದ ಮೇರೆಗೆ ಅರಣ್ಯ ಇಲಾಖೆ ಸಕ್ರೆಬೈಲು ಆನೆ ಬಿಡಾರದ 3 ಸಾಕಾನೆಗಳನ್ನು ತಂದು ಕಾಡಾನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಹಲವು ತಿಂಗಳು ಕಾಣದಾಗಿದ್ದ ಕಾಡಾನೆಗಳು ಮಳೆಗಾಲ ಮುಗಿಯುತ್ತಿದ್ದಂತೆ ಮತ್ತೆ ಪ್ರತ್ಯಕ್ಷವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net