ಕಾಡಾನೆ ತುಳಿದು ವ್ಯಕ್ತಿ ಮೃತ : ಸ್ಥಳದಲ್ಲಿ  ಪ್ರತಿಭಟನೆ

ಕಾಡಾನೆ ತುಳಿದು ವ್ಯಕ್ತಿ ಮೃತ : ಸ್ಥಳದಲ್ಲಿ  ಪ್ರತಿಭಟನೆ
Published on

ಸಕಲೇಶಪುರ: ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.   

ಗ್ರಾಮದ ಮನುಕುಮಾರ್ (32) ಮೃತರು. ಗ್ರಾಮದ ಹೊರವಲಯದಲ್ಲಿನ ಮನೆ ದೇವರ ಪೂಜೆಗೆಂದು ಮಂಗಳವಾರ ಮುಂಜಾನೆ 8.30 ರಲ್ಲಿ ದೇವಸ್ಥಾನಕ್ಕೆ ನಡೆದು ಹೋಗುತ್ತಿದ್ದ ವೇಳೆ ಪಾಳು ತೋಟದಿಂದ ರಸ್ತೆಗೆ ಬಂದ ಕಾಡಾನೆ ವ್ಯಕ್ತಿ ಯ ತಲೆಯ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ.  ಮೃತರಿಗೆ ಮೂರು ವರ್ಷದ ಹಿಂದೆ ವಿವಾಹ ವಾಗಿದ್ದು ಪತ್ನಿ ಒಂದು ಹೆಣ್ಣು ಮಗುವಿದೆ.     

 ಪ್ರತಿಭಟನೆ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ  ಗ್ರಾಮಸ್ಥರು, ಹಾಸನ ಬೆಳೆಗಾರ ಸಂಘಟನೆ ಪದಾಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರು  ಶಾಸಕ ಎಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸ ಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು.

ಆದರೆ ಹಾಸನದಲ್ಲಿದ್ದ ಉಸ್ತುವಾರಿ ಸಚಿವರು ವಿಷಯ ತಿಳಿದ ನಂತರವು ಬೆಂಗಳೂರಿಗೆ ತೆರಳಿದ್ದಾರೆ ಎಂಬ ವಿಷಯ ತಿಳಿದ ಪ್ರತಿಭಟನಕಾರರು ಉಸ್ತುವಾರಿ ಸಚಿವರು ಆಗಮಿಸುವವರಗೂ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಆಹೋರಾತ್ರಿ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದರು.

ಈ ವೇಳೆ ಸ್ಥಳಕ್ಕಾಮಿಸಿದ ಜಿಲ್ಲಾಧಿಕಾರಿ ಅರ್ಚನಾ ಪ್ರತಿಭಟನಕಾರರೊಂದಿಗೆ ಮಾತನಾಡಿ ಮಲೆನಾಡಿನಲ್ಲಿ ಕಾಡಾನೆಗಳು ನಡೆಸುತ್ತಿರುವ ಉಪಟಳದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದೇನೆ ದಯವಿಟ್ಟು ಮೃತದೇಹ ಮೇಲೆತ್ತಲು ಸಹಕರಿಸುವಂತೆ  ಮನವಿ ಮಾಡಿದರು ಜಿಲ್ಲಾಧಿಕಾರಿಗಳ ಮನವಿಗೆ ಒಪ್ಪದ ಪ್ರತಿಭಟನಾಕಾರರು ಬೇಡಿಕೆ ಈಡೇರುವವರಗೂ ಪ್ರತಿಭಟಿಸಲಾಗುವುದು ಎಂದು ಪಟ್ಟು ಹಿಡಿದರು.

ಮದ್ಯಪ್ರವೇಶಿಸಿ ಮಾತನಾಡಿದ ಶಾಸಕ ಎಚ್ ಕೆ ಕುಮಾರಸ್ವಾಮಿ ಜನರ ಸಮಸ್ಯೆಗಳನ್ನು ಜಿಲ್ಲಾಡಳಿತ  ಹಾಗೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನೂರಾರು ಜನರ ಸಾವು ಸಂಭವಿಸಿದರು ಶಶ್ವಾತ ಪರಿಹಾರ ೂಪಿಸದಿದ್ದರೆ ಹೇಗೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವಿಷಯ ತಿಳಿಸಿ ಸಂಭಂದ ಪಟ್ಟ ಸಚಿವರು ಅಧಿಕಾರಿಗಳು ಸ್ಥಳಕ್ಕೆ ಬರಲಿ ಎಂದರು. 

ಪ್ರತಿಭಟನಕಾರರನ್ನು ಸಮದಾನ ಪಡಿಸಲು ಮುಂದಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಬಸವರಾಜ್ ಅವರ ವಿರುದ್ದ ಪ್ರತಿಭಟನಾಕಾರರು ತಿರುಗಿಬಿದ್ದು ಕೂಗಾಟ ನಡೆಸಿದರು.

ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವವರಗೂ ಪ್ರತಿಭಟನೆ ಹಿಂದೆ ಪಡೆಯುವ ಪ್ರಶ್ನೆ ಯೆ ಇಲ್ಲ ಎಂದರು ಇದಾದ ಕೆಲವು ನಿಮಿಷ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಬಂದ ಹಾದಿಗೆ ಸುಂಕವಿಲ್ಲದಂತೆ ವಾಪಸ್ಸದರು. ಪ್ರತಿಭಟನೆ ನೇತೃತ್ವವನ್ನು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಕರವೇ ಅಧ್ಯಕ್ಷ ದಿನೇಶ್,ಜಾನೇಕೆರೆ ಸಾಗರ್,ಯಡೆಹಳ್ಳಿ ಮಂಜುನಾಥ್, ಬಾಳ್ಳು ಪ್ರದೀಪ ಮುಂತಾದವರು ವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net