

ಬೇಲೂರು: ಕಟಾವಿಗೆ ಬಂದಿದ್ದ ಭತ್ತದ ಪೈರಿಗೆ 20ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶ ಪಡಿಸಿರುವ ಘಟನೆ ತಾಲೂಕಿನ ಅರೇಹಳ್ಳಿ ಸಮೀಪದ ಕಡೇನಹಳ್ಳಿ-ಹಿರಿಗರ್ಜೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಈರಪ್ಪಗೌಡ, ರಾಮೇಗೌಡ, ದ್ಯಾವಪ್ಪಗೌಡ, ಆನಂದ, ಮಂಜುನಾಥ್ ಎಂಬ ರೈತರಿಗೆ ಸೇರಿದ ಭತ್ತದ ಗದ್ದೆಗಳಿಗೆ ಕಾಡಾನೆಗಳ ಹಿಂಡುದಾಳಿ ಮಾಡಿ ಬೆಳೆ ತಿಂದು, ತುಳಿದು ನಾಶ ಪಡಿಸಿವೆ. ಕೊಯ್ಲಿಗೆ ಬಂದಿದ್ದ ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.