

ಹುಮನಾಬಾದ್: ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ್ದು, ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಉಳಿವಿಗೆ ಕೈಜೋಡಿಸಬೇಕು. ಇಲ್ಲಿ ಕಾಟಾಚಾರಕ್ಕೆ ಕಾರ್ಯಕ್ರಮದ ಅಮಂತ್ರಣ ಪತ್ರಿಕೆಯಲ್ಲಿ ಹೆಸರು ಇವೆ. ಇಬ್ಬರು ವಿಧಾನ ಪರಿಷತ್ ಸದಸ್ಯರು ಬರಬೇಕಾಗಿತ್ತು. ಅವರಿಗೆ ಇದಕ್ಕೆ ಸಮಯವಿಲ್ಲ ಎಂದು ಟೀಕಿಸಿದರು. ಉಪನ್ಯಾಸಕ ಶಿವಶಂಕರ ತರನಳ್ಳಿ ಮಾತನಾಡಿದರು.
ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಪ್ರಾಸ್ತಾವಿಕ ಮಾತನಾಡಿದರು. ಸಾಧಕರಾದ ಜಗನಾಥರಡ್ಡಿ ತಿರಲಾಪೂರೆ, ಡಾ.ವೆಂಕಟ ಜಾಧವ್, ಶಿವಕುಮಾರ ಕಿವಡೆ, ಮಡೆಪ್ಪ ಕುಂಬಾರ, ಬಜರಂಗ ಹುಪಳೆ ಅವರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಪ್ರಮುಖರಾದ ನಾಗಶೆಟ್ಟಿ ಡುಮಣೆ, ಮಂಜುನಾಥ ಪಂಚಾಳ, ಡಾ.ಗೋವಿಂದ, ವೆಂಕಟೇಶ ಗೂಡಾಳ, ಮಾಣಿಕಪ್ಪ ಬಕ್ಕನ್ ಇತರರಿದ್ದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಣೆ ಮಾಡಿದರು.