ಕಾಗಿಣಾ ನದಿಯಲ್ಲಿ ಅಕ್ರಮ ಮರಳಿಂದ ರು.2000 ಕೋಟಿ ನಷ್ಟ

Avvanna Myakeri
Published on

ಕಲಬುರಗಿ: ಚಿತ್ತಾಪುರ ತಾಲೂಕಿನ ಬಾಗೋಡಿ ಸೇರಿ ಕಾಗಿಣಾ ನದಿ, ನದಿ ತೀರದಲ್ಲಿ ಅಕ್ರಮ ಮರಳು ಸಾಗಣೆ ಮೂಲಕ ಸುಮಾರು ೨೦೦೦ ಕೋಟಿ ರೂ. ರ‍್ಕಾರಕ್ಕೆ ತೆರಿಗೆ ವಂಚನೆಯಾಗಿದೆ ಎಂದು ಬಳ್ಳಾರಿ ಮೂಲದ ತನಿಖಾ ತಂಡ ವರದಿಯಲ್ಲಿ ತಿಳಿಸಿದೆ ಎಂದು ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ಅಕ್ರಮದ ಕುರಿತು ಸಿಎಂ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಆದೇಶಿಸಿದ್ದರು. ಖನಿಜ ಮತ್ತು ಭೂ ವಿಜ್ಞಾನ ಇಲಾಖೆ ಬಳ್ಳಾರಿ ಅಧಿಕಾರಿಗಳು ಪರಿಶೀಲಿಸಿದ್ದು, ವಿವಿಧೆಡೆ ಅಕ್ರಮ ಮರಳುಗಾರಿಕೆ ಸ್ಪಷ್ಟವಾಗಿದೆ. ಕಾಗಿಣಾ ನದಿಯಲ್ಲಿ ಸುಮಾರು ೫ ಕಿ.ಮೀ. ರಸ್ತೆ ಅಕ್ರಮ, ಅನಧಿಕೃತವಾಗಿ ನರ‍್ಮಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರ‍್ಕಾರದಿಂದ ೧೨ ಪಟ್ಟಾ ಜಮೀನಿನಲ್ಲಿ ಮರಳು ತೆಗೆಯಲು ಅನುಮತಿಸಲಾಗಿತ್ತು. ಇದುವರೆಗೆ ಸಾವಿರಾರೂ ಕೋಟಿ ರೂ. ಮರಳು ಸಾಗಿಸಲಾಗಿದೆ. ಆದರೆ, ರ‍್ಕಾರಕ್ಕೆ ಮಾತ್ರ ಲಕ್ಷಗಳ ಲೆಕ್ಕದಲ್ಲಿ ರಾಜಧನ ಪಾವತಿಸಲಾಗಿದೆ.

ಬಾಗೋಡಿ ಸುತ್ತಲಿನ ಜಮೀನಿನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಮೀಕ್ಷೆ ಮ್ಯಾನುವಲ್​ ಆಗಿ ಮಾಡಲು ಸಾಧ್ಯವಿಲ್ಲ ಎಂದು ಬಳ್ಳಾರಿ ತಂಡ ತಿಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನಡೆಸಿದರೆ ಸಮೀಕ್ಷೆ ಪರ‍್ಣ ಪ್ರಮಾಣದಲ್ಲಿ ಆಗಲಿದೆ ಎಂದು ತಂಡ ಹೇಳಿದೆ. ಸದ್ಯಕ್ಕೆ ಮ್ಯಾನುವಲ್​ ಪರಿಶೀಲನೆಯ ವರದಿ ರ‍್ಕಾರಕ್ಕೆ ಸಲ್ಲಿಸುತ್ತೇವೆ ಎಂದಿದ್ದಾರೆ ಎಂದರು.

ಪಟ್ಟಾ ಜಮೀನಿನ ಐದು ಎಕರೆ ಅನುಮತಿ ಪಡೆದು ೪೦ರಿಂದ ೫೦ ಎಕರೆ ವರೆಗೆ ಮರಳು ಗಣಿಗಾರಿಕೆ ಮಾಡಲಾಗಿದೆ. ಇದಕ್ಕೆ ನೇರ ಮರಳು ಟಾಸ್ಟ್​ ರ‍್ಸ್​ ಸಮಿತಿ ಅಧ್ಯಕ್ಷ ಜಿಲ್ಲಾಕಾರಿ, ಸಮಿತಿ ಸದಸ್ಯ ಎಸ್​ಪಿ ಸೇರಿ ಸ್ಥಳಿಯ ಪೊಲೀಸರು ಕಾರಣ. ಎಲ್ಲರ ವಿರುದ್ಧ ಕ್ರಮವಾಗಬೇಕು. ಇದಕ್ಕೆ ನೇರಹೊಣೆ ಎಂದರು.

ಪ್ರೇಮ್​ ಕೋಲಿ, ತಳವಾರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರ‍್ದಾರ ರಾಯಪ್ಪ, ಚಂದ್ರಕಾಂತ ಕಿರಿಸಾವಳಗಿ, ಪ್ರವಿಣ, ಭೋಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net