ಕಾಗಿಣಾ ನದಿಗೆ ಪ್ರವಾಹ, ಮುಳುಗಿದ ಬ್ಯಾರೇಜ್

28 7 SBD 1B
ಶಂಕರವಾಡಿ ಬಳಿಯ ಕಾಗಿಣಾ ನದಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಬಳಸುವ ಯಂತ್ರಗಳು ಮುಳುಗಿರುವುದು.
Published on

ಶಹಾಬಾದ್: ಚಂದ್ರಂಪಳ್ಳಿ, ಮುಲ್ಲಾಮಾರಿ ಡ್ಯಾಮ್‌ಗಳಿಂದ ಹೆಚ್ಚುವರಿ ನೀರನ್ನು ಬಿಟ್ಟಿದ್ದರಿಂದ ಕಾಗಿಣಾ ನದಿಗೆ ಪ್ರವಾಹ ಹೆಚ್ಚಾಗಿದ್ದು, ತಾಲೂಕಿನ ನಾಲ್ಕು ಬ್ಯಾರೇಜ್‌ಗಳು ಮುಳುಗಡೆಯಾಗಿವೆ.

ಮುತ್ತಗಿ, ಶಂಕರವಾಡಿ, ಗೋಳಾ (ಕೆ) ಹಾಗೂ ಇಂಗಳಗಿ ಗ್ರಾಮದ ಬಳಿಯ ಬ್ರೀಜ್ ಕಂ ಬ್ಯಾರೇಜ್‌ಗಳು ಮುಳುಗಿದ್ದು, ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮತ್ತಗಿಯಿಂದ ಕದ್ದರಗಿ- ಚಿತ್ತಾಪುರ ಹಾಗೂ ಗೋಳಾ (ಕೆ)ದಿಂದ ಶಹಾಬಾದ್-ಗೋಳಾ, ಇಂಗಳಗಿ ವಾಡಿ ಸಂಚಾರ ಸ್ಥಗಿತಗೊಂಡಿದೆ. ಶಂಕರವಾಡಿ ಬಳಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಯಂತ್ರಗಳು ನದಿಯಲ್ಲಿ ಮುಳುಗಡೆಯಾಗಿವೆ. ಇನ್ನು ಸಾಕಷ್ಟು ಜಮೀನುಗಳಿಗೆ ಮಳೆ ನೀರು ನುಗ್ಗಿ, ಬೆಳೆ ಹಾನಿಯಾಗಿದೆ.

ಶಹಾಬಾದ್‌ನ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಮನೆಯೊಂದರ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಹಸೀಲ್ದಾರ್ ಗುರುರಾಜ ಸಂಗಾವಿ ಹಾಗೂ ಸಿಬ್ಬಂದಿ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net