

ಕಾಗವಾಡ: ತಾಲೂಕು ವಕೀಲರ ಸಂಘಕ್ಕೆ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಎಸ್. ಕನಾಳ ಮತ್ತು ಸಿ.ಎಸ್. ಮಠಪತಿ ಮಧ್ಯೆ ಪಿ.ಎಸ್.ಕನ್ನಾಳ ೫೪ ಮತ ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ೮೩ರ ಪೈಕಿ ೭೯ ಸದಸ್ಯರು ಮತದಾನ ಮಾಡಿದರು. ಉಪಾಧ್ಯಕ್ಷರಾಗಿ ಎಂ.ಎ. ಪಾಟೀಲ, ಕಾರ್ಯದರ್ಶಿಯಾಗಿ ಸಿ.ಎ. ಅಂಬೋಳೆ, ಖಜಾಂಚಿಯಾಗಿ ಎಸ್.ಎಂ.ಭರಮದೆ, ಜಂಟಿ ಕಾರ್ಯದರ್ಶಿಯಾಗಿ ಎ.ಎ.ಪಾಟೀಲ, ಸದಸ್ಯರಾಗಿ ಎಸ್.ಜಿ.ಚೌಗುಲೆ, ಬಿ.ಜೆ.ಮೋಳೆ, ವಿ.ಕೆ.ಪಾಟೀಲ, ಎಸ್.ಆರ್.ಮೊರಬ, ಜೆ.ಐ.ಮೋಮಿನ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಜೆ.ಡಿ. ಕುರುಂದವಾಡೆ ಕಾರ್ಯನಿರ್ವಹಿಸಿದರು. ಮುಖಂಡ ಕಾಕಾ ಪಾಟೀಲ, ಸಂಘದ ಮಾಜಿ ಅಧ್ಯಕ್ಷ ಪಿ.ಎ. ಮಾನೆ, ಹಿರಿಯ ವಕೀಲರಾದ ಅಭಯ ಅಕಿವಾಟೆ, ಎಸ್.ಎಂ.ಉದಗಾಂವೆ, ಎ.ಬಿ. ಭಂಡಾರೆ, ಬಿ.ಆರ್. ರಾವ, ಆರ್.ಎಸ್. ಸಾಲಿಮನಿ, ಎ.ಬಿ. ದಿಕ್ಷಾಂತ, ವಿದ್ಯಾಧರ ಮೌರ್ಯ, ಎ.ಎಸ್. ಮುತಾರೆ, ಎಂ.ಎಸ್. ಹೊನಕಾಂಬಳೆ, ಅಮೋಲ ಕಮತೆ, ಪಿ.ಎನ್. ಕಾಂಬಳೆ, ಎಸ್.ಡಿ. ಕಾಂಬಳೆ ಇತರರಿದ್ದರು.