

ವಿಜಯಪುರ : ನಗರದಲ್ಲಿ ಡಿ. 7ರಂದು ನಡೆಯಲಿರುವ ವೃಥಾನ್ ಹೆರಿಟೇಜ್ ರನ್& 2025ರಲ್ಲಿ ಪಾಲ್ಗೊಳ್ಳುವಂತೆ ಕಾಖಂಡಕಿ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.ವೃಥಾನ್ ಹೆರಿಟೇಜ್ ಕೋರ್ ಕಮಿಟಿ ಸದಸ್ಯರಾದ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ ಹಾಗೂ ವಿನಯಕುಮಾರ ಕಂಚ್ಯಾಣಿ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಆಶ್ರಮಕ್ಕೆ ಸೋಮವಾರ ಭೇಟಿ ಮಾಡಿ ಹೆರಿಟೇಜ್ ರನ್ನಲ್ಲಿ ಪಾಲ್ಗೊಳ್ಳುವಂತೆ ನೀಡಿದ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಈ ಬಾರಿ ನಡೆಯಲಿರುವ ವೃಥಾನ್ ಹೆರಿಟೇಜ್ ರನ್ 5 ಕಿಮೀ. ವಿಭಾಗದಲ್ಲಿ ಪಾಲ್ಗೊಳ್ಳುತ್ತೇನೆ. ನೆಲ, ವೃ, ಶಿಣ, ಆರೋಗ್ಯ, ಪ್ರಾಚಿನ ಸ್ಮಾರಕಗಳ ಸಂರಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆಯೋಜಿಸಿರುವ ಈ ಓಟದಲ್ಲಿ ತಾವೂ ಪಾಲ್ಗೊಳ್ಳಬೇಕು. ಹಲವು ಗ್ರಾಮಗಳ ಭಕ್ತರು ನಾಲ್ಕೆದು ಕಿಮೀ. ನಡೆದುಕೊಂಡು ಆಶ್ರಮಕ್ಕೆ ಬರುತ್ತೀರಿ. ಹೀಗಾಗಿ ಹೆರಿಟೇಜ್ ರನ್ನಲ್ಲಿ 5 ಕಿಮೀ. ವಿಭಾಗದಲ್ಲಿ ಪಾಲ್ಗೊಳ್ಳಬೇಕೆಂದು ಭಕ್ತರಿಗೆ ಸಲಹೆ ನೀಡಿದರು.
ಡಿಸೆಂಬರ್ನಲ್ಲಿ ನಡೆಯಲಿರುವ ವೃಥಾನ್ ಹೆರಿಟೇಜ್ ರನ್ನಲ್ಲಿ ಪಾಲ್ಗೊಳ್ಳುವಂತೆ ಕಾಖಂಡಕಿ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿಗಳಿಗೆ ಹೆರಿಟೇಜ್ ರನ್ ಕೋರ್ ಕಮಿಟಿ ಸದಸ್ಯರು ಆಹ್ವಾನ ನೀಡಿದರು. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ, ವಿನಯಕುಮಾರ ಕಂಚ್ಯಾಣಿ ಮತ್ತಿತರರಿದ್ದಾರೆ.