ಕಾಕತಿಯಲ್ಲಿ ವಿಶ್ವ ಶೌಚಗೃಹ ದಿನ, ಜಾಗೃತಿ ಕಾರ್ಯಕ್ರಮ

18Jaggu2-Web
ಬೆಳಗಾವಿ ತಾಲೂಕಿನ ಕಾಕತಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಡಾ. ನಾಗರಾಜ ಪಾಟೀಲ ಮಾತನಾಡಿದರು. ಮಂಜುನಾಥ ಬಳ್ಳಾರಿ, ಮಂಜುನಾಥ ಪೈ, ಮುಖ್ಯ ಶಿಕ್ಷಕ ಬಿ.ಎನ್. ಮಡಿವಾಳರ, ಶಿಕ್ಷಕ ವಿ.ಕೆ. ರಾಜಮಾನೆ ಇತರರಿದ್ದರು.
Published on

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್‌ಎಂ ಸಮುದಾಯ ಬಾನುಲಿ ಕೇಂದ್ರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಕಾಕತಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ವಿಶ್ವ ಶೌಚಗೃಹ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಜರುಗಿತು.

ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸಮಯದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ, ಎನ್‌ಎಸ್‌ಎಸ್ ಅಧಿಕಾರಿ ಡಾ. ನಾಗರಾಜ ಪಾಟೀಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಕ್ಕಳಿಗೆ ವಿಶ್ವ ಶೌಚಗೃಹ ದಿನದ ಹಿನ್ನೆಲೆ, ಇತಿಹಾಸ, ಮಹತ್ವ ತಿಳಿಸಿದರು. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಶೌಚಗೃಹಗಳು ಇರುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು.

ಮಂಜುನಾಥ ಬಳ್ಳಾರಿ, ಮಂಜುನಾಥ ಪೈ, ಮುಖ್ಯ ಶಿಕ್ಷಕ ಬಿ.ಎನ್.ಮಡಿವಾಳರ, ಶಿಕ್ಷಕ ವಿ.ಕೆ. ರಾಜಮಾನೆ ಹಾಗೂ ಶಿಕ್ಷಕರು, ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net