ಕಾಂಪೌಡ್ ಮೇಲೆ ಚಿರತೆ ರಾಜಾರೋಷ ನಡೆ

ಕಾಂಪೌಡ್ ಮೇಲೆ ಚಿರತೆ ರಾಜಾರೋಷ ನಡೆ
Published on

ಹಾಸನ: ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಶನಿವಾರ ರಾತ್ರಿ ದಾರಿಯಲ್ಲಿ ಸಾಗುತ್ತಿದ್ದು ಪ್ರಯಾಣಿಕರು ಅದನ್ನು ಕಂಡು ಟಾರ್ಚ್ ಬಿಟ್ಟಿದ್ದಾರೆ.


ಚಿರತೆಯ ಮೇಲೆ ಟಾರ್ಚ್ ಬೆಳಕು ಬಿಡುತ್ತಿದ್ದಂತೆ ಕೈಗಾರಿಕ ವಲಯದ ಆವರಣದಲ್ಲಿ ಇದ್ದ ಕಾಂಪೌಡ್ ಮೇಲೆ ರಾಜಾರೋಷವಾಗಿ ಸಾಗುತ್ತಿದ್ದು ಮೊಬೈಲ್ ಒಂದರಲ್ಲಿ ಸೆರೆಹಿಡಿಯಲಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಕುರಿತು ಆತಂಕಕ್ಕೆ ಒಳಗಾಗಿರುವ ಸ್ಥಳೀಯರು ಅರಣ್ಯ

ಇಲಾಖೆಗೆ ಕೂಡಲೆ ಚಿರತೆಯನ್ನು ಸೆರೆಹಿಡಿಯಲು ಬೋನ್ ಹಿಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net