ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಲಾರಿ

15-10--krs2 (4)
ಹೊಂಗಳ್ಳಿ ಗ್ರಾಮದ ವಾಣಿವಿಲಾಸ ನೀರು ಸರಬರಾಜ ಕೇಂದ್ರದ ಮುಖ್ಯದ್ವಾರದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿರುವ ಲಾರಿ.
Published on

ಕೆ.ಆರ್.ಸಾಗರ: ಸಮೀಪದ ಹೊಂಗಳ್ಳಿ ಗ್ರಾಮದ ವಾಣಿವಿಲಾಸ ನೀರು ಸರಬರಾಜ ಕೇಂದ್ರದ ಮುಖ್ಯದ್ವಾರದ ಕಾಂಪೌಂಡ್‌ಗೆ ಶನಿವಾರ ಸಂಜೆ ಕಲ್ಲು ಸಾಗಣೆ ಮಾಡುವ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾಂಪೌಂಡ್ ಉರಳಿ ಬಿದಿದೆ.

ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪರವಾನಿಗೆ ಇಲ್ಲದೆ ಲಾರಿ ಕಲ್ಲು ಸಾಗಿಸುತ್ತಿತ್ತು ಎನ್ನಲಾಗಿದ್ದು, ಕೆ.ಆರ್.ಸಾಗರ ಟೊಲ್ ಬಳಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ನೀರು ಸರಬರಾಜು ಕೇಂದ್ರದ ರಸ್ತೆ ಮೂಲಕ ಸಾಗಲು ಯತ್ನಿಸಿದ ಸಂದರ್ಭ ಈ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ನೌಕರರು ಲಾರಿ ನಿಲ್ಲಿಸಲು ತಿಳಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಚಾಲಕ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net