

ಬೇಲೂರು: ಬೇಲೂರು ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಯಾಗಲಿ, ಸಾರ್ವಜನಿಕರು ಗುರುತಿಸುವಂತಹ ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದ್ದರೆ ನನ್ನ ಮುಂದೆ ಹೇಳಿಕೆ ನೀಡಲೆಂದು ಮಾಜಿ ಸಚಿವ ಬಿ.ಶಿವರಾಂ, ಜೆಡಿಎಸ್ ಪಕ್ಷದ ಮುಖಂಡರ ವಿರುದ್ಧ ಹರಿ ಹಾಯ್ದರು.
ತಾಲೂಕಿನ ಸೂರಾಪುರ ಸಮೀಪ ಆಯೋಜಿಸಿದ್ದ ಚಿಕ್ಕಮೇದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೇಸ್ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷದ ಮುಖಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸದರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಕ್ತಿ ಇಲ್ಲದೆ ಇದ್ದಿದ್ದರೆ ಜೆಡಿಎಸ್ ಯಾವ ಸ್ಥಾನದಲ್ಲಿರುತ್ತಿತ್ತು ಎಂಬುದನ್ನು ಮೊದಲು ಸಂಸದರು ತಿಳಿದು ಮಾತನಾಡಲಿ, ಬೇಲೂರು ತಾಲೂಕಿನ ಯಗಚಿ ಜಲಾಶಯ ನಿರ್ಮಿಸಿ ಇಲ್ಲಿಂದ ಹೊಳೆನರಸೀಪುರಕ್ಕೆ ನೀರು ತೆಗೆದುಕೊಂಡು ಹೋದರು.
ಇದನ್ನು ಪ್ರಶ್ನಿಸುವ ಕಾಲ ಬಂದಿದೆ, ಎತ್ತಿನ ಹೊಳೆ ಯೋಜನೆ ಜಾರಿಗೆ ತರಲು ಮೊದಲು ನಕಾಸೆ ಸಿದ್ದಪಡಿಸಿದ್ದು ನಮ್ಮ ನಾಯಕರಾದ ಸಿದ್ದರಾಮಯ್ಯರವರು, ಆದರೆ ಜೆಡಿಎಸ್‌ನವರು ನಮ್ಮ ಕೊಡುಗೆ ಅಂತ ಹೇಳುತ್ತಿದ್ದಾರೆ, ವಿಶ್ವ ವಿಖ್ಯಾತ ಬೇಲೂರು ಮುಖ್ಯ ರಸ್ತೆ ಅಗಲೀಕರಣ ಸಾಧ್ಯವಾಗದೆ ಬದಲಿ ರಸ್ತೆ ಮಾಡಲು ಹೊರಟಿದ್ದಾರೆ, ಅಂದರೆ ಬದಲಿ ರಸ್ತೆಗೆ ಬರುವ ಕುಟುಂಬ ಬೀದಿಗೆ ಬರ ಬೇಕೆಂಬುದು ಇವರ ಮನಸ್ಥಿತಿ, ಹಳೇಬೀಡು ಮಾದಿಹಳ್ಳಿಗೆ ಶಾಶ್ವತ ನೀರಾವರಿ ಯೋಜನೆಗಳು ನಮ್ಮ ಕಾಂಗ್ರೇಸ್ ಪಕ್ಷದ ಕೊಡುಗೆ. ಅಲ್ಲದೆ ಹೊಳೆನರಸೀಪುರ ಅಭಿವೃದ್ಧಿ ಮಾಡಲು ಇವರಿಗೆ ಸಾಧ್ಯವಿದೆ. ಅದೇ ಬೇಲೂರು ತಾಲೂಕನ್ನು ಅಭಿವೃದ್ಧಿ ಪಡಿಸಲು ಮನಸ್ಸಿಲ್ಲದ ಇವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು. ಪ್ರಜ್ವಲ್‌ರವರು ಸಂಸದರಾಗಿ 4 ವರ್ಷವಾಗಿದೆ. ಆದರೆ ಇಲ್ಲಿವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆಗಳನ್ನು ತರಲಿಲ್ಲ. ಆದರೆ ಚುನಾವಣೆ ಪ್ರಚಾರಕ್ಕಾಗಿ ಇಲ್ಲದ್ದನ್ನೆಲ್ಲ ಮಾತನಾಡುತ್ತಾರೆ. ಗಂಡಸಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಸಾಧ್ಯವಾಗದ್ದಿದ್ದಕ್ಕೆ ಆ ಕ್ಷೆತ್ರವೇ ಇಲ್ಲದಂತೆ ಮಾಡಿದರು, ಇವರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಇನ್ನೂ ಬಿಜೆಪಿಯವರ ಬಗ್ಗೆ ಎಚ್ಚರದಿಂದಿರಬೇಕು. ಅವರು ಯಾರೂ ಕೆಲಸಗಾರರಲ್ಲ. ಅವರದೇನಿದ್ದರೂ ಶೇಕಡಾ 40% ಲಂಚ ಪಡೆಯುವುದೇ ಅವರ ಕೆಲಸ. ಬಿಜೆಪಿಯವರು ಹಣ ಕೊಟ್ಟರೆ, ಜೆಡಿಎಸ್‌ನವರು ನಾಟಕವಾಡುತ್ತಾರೆ. ಇದನ್ನು ಕ್ಷೇತ್ರದ ಮತದಾರರು ಅರಿಯಬೇಕಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಎಂಬ ಎರಡು ಶಾಶ್ವತ ಪರಿಹಾರದ ಯೋಜನೆಗಳನ್ನು ಜಾರಿಗೆ ತರಲಿದ್ದು, ಇದರಿಂದ ಹಲವಾರು ಉಪಯೋಗವಿದೆ. ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲು ನಮ್ಮ ಪಕ್ಷ ಸಿದ್ದವಿದೆ ಎಂದರು,
ಮಾಜಿ ಪುರಸಭೆ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಚುನಾವಣೆ ಪರ್ವ ಈಗ ಪ್ರಾರಂಭವಾಗಿದೆ. ಕೆಲ ಆಕಾಂಕ್ಷಿಗಳು ನಾನು ಮುಂದೆ ನಾನು ಮುಂದೆ ಎಂದು ಹನುಮ ಜಯಂತಿ, ಬೇಲೂರು ಉತ್ಸವ, ದೇವಸ್ಥಾನ ಉದ್ಧಾರ ಎಂದು ಅನೇಕ ಕೆಲಸಗಳನ್ನು ಮಾಡಿ ಜನರನ್ನು ಮರಳು ಮಾಡಲು ಮುಂದಾಗುತಿದ್ದಾರೆ. ಆದರೆ ನಮ್ಮ ಮಾಜಿ ಸಚಿವರಾದ ಬಿ.ಶಿವರಾಮಣ್ಣರವರು ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಒಇಬ್ಬ ಜನ ಸೇವಕರಾಗಿ ಗುರುತಿಸಿ ಕೊಂಡಿದ್ದಾರೆ. ಅವರು ಶಾಸಕರಾಗಿ. ಸಚಿವರಾಗಿ ಮಾಡಿರುವ ಕೆಲಸಗಳೆ ಅವರನ್ನು ಗುರುತಿಸುತ್ತದೆ. ಅವರು ಇನ್ನು ಮುಂದ ಎಗಮಡಸಿ ಶಿವರಾಮ್ ಅಲ್ಲ, ಬೇಲೂರು ಶಿವರಾಮ್ ಆಗಿ ಕೆಲಸ ಮಡಲಿದ್ದಾರೆ. ಅವರದೇನಿದ್ದರೂ ಬೇಲೂರು ಕ್ಷೇತ್ರದ ಅಭಿವೃದ್ಧಿ ಚಿಂತನೆಯಾಗಿದ್ದು, ಅವರನ್ನು ಶಾಸಕರನ್ನಾಗಿ ಮಾಡಿದರೆ ಬೇಲೂರು ಅಭಿವೃದ್ಧಿಯಲ್ಲಿ ಮುಂದೆ ಸಾಗಲಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿ.ೆ ಇಲ್ಲಿವರೆಗೆ 18 ಸಭೆ ನಡೆಸಿದ್ದು ತಳ ಮಟ್ಟದಿಂದ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಪಕ್ಷವನ್ನು ಬಲಪಡಿಸುವ ಉದ್ದೇಶೀವಾಗಿದೆ ಎಂದರು
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಯ್ಯದ್ ತೋಫೀಕ್, ಪುರಸಭೆ ಸದಸ್ಯರಾದ ಶಾಂತಕುಮಾರ್, ಎ.ಆರ್.ಅಶೋಕ್, ಜಮಾಲೂದ್ದಿನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಮುಖಂಡರಾದ ಗೆಂಡೆಹಳ್ಳಿ ಶ್ರೀನಿವಾಸ್, ಸಂತೋಷ್, ಚಂದ್ರಶೇಖರ್ ನವೀದ್ ಸೇರಿದಂತೆ ಇತರರಿದ್ದರು,
ಚಿತ್ರ:6(ಬಿಎಲ್‌ಆರ್)2-ತಾಲೂಕಿನ ಸೂರಾಪುರ ಸಮೀಪ ಆಯೋಜಿಸಿದ್ದ ಮಾಡಿ ಕೊಳ್ಳುತ್ತಿರುವ ಮಾಜಿ ಸಚಿವ ಬಿ.ಶಿವರಾಮ್ ಇತರರು