ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಹಿಡಿಯುವ ಹಗಲುಗನಸು

24_GBD_BJP
Published on

ಗೌರಿಬಿದನೂರು: ಕಾಂಗ್ರೇಸ್ಸಿಗರು ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ್ ಲೇವಡಿ ಮಾಡಿದರು.

ನಗರದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಪ್ರಧಾನ ನರೇಂದ್ರ ಮೋದಿ ಅವರ ಆಡಳಿತ ಶೈಲಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್‌ನವರಿಗೆ ಕನಿಷ್ಠ ಪಿಪಿಇ ಕಿಟ್ ತಯಾರಿಸುವ ಶಕ್ತಿ ಕೂಡ ಅವರ ಸರ್ಕಾರಕ್ಕೆ ಇರಲಿಲ್ಲ, ವ್ಯಾಕ್ಸಿನ್ ಬಗ್ಗೆಯೂ ವ್ಯಾಪಕವಾಗಿ ಟೀಕಿಸಿದ್ದವರು ಈಗ ಸೋಂಕಿಗೆ ತುತ್ತಾಗಿ ಲಸಿಕೆಗೆ ಶರಣಾಗಿದ್ದಾರೆ. ಇವರ ಎಡಬಿಡಂಗಿತನವನ್ನು ದೇಶವೇ ಗಮನಿಸುತ್ತಿದೆ ಎಂದರು.

ಬಿಜೆಪಿಗೆ ತನ್ನದೇ ಆದ ತತ್ವ-ಸಿದ್ಧಾಂತ ಹೊಂದಿದೆ. ಪ್ರತಿ ಕಾರ್ಯಕರ್ತ ಪಕ್ಷದ ಶಿಸ್ತಿಗೆ ಬದ್ಧನಾಗಿರುತ್ತಾನೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಕಮಲ ಅರಳುವುದು ಖಚಿತ ಎಂದು ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಪ್ರತಿ ಕಾರ್ಯಕರ್ತನೂ ತುಪಾಕಿಯಲ್ಲಿನ ಗುಂಡುಗಳಿದ್ದಂತೆ. ಚುನಾವಣೆ ವೇಳೆ ಸದ್ದಿಲ್ಲದೆ ಪ್ರತಿಪಕ್ಷಗಳ ಮೇಲೆ ಸಿಡಿಯುತ್ತದೆ ಎಂದು ಜಿಲ್ಲಾ ಮಾಜಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ಹುರಿದುಂಬಿಸಿದರು.

ತಾಲೂಕು ಅಧ್ಯಕ್ಷರಾದ ಎ.ಮೋಹನ್ ಮತ್ತು ರಮೇಶ್‌ರಾವ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ತಾಲೂಕು ಕಾರ್ಯದರ್ಶಿ ಜಯ್ಯಣ್ಣ, ನಾರಾಯಣರೆಡ್ಡಿ, ಆನಂದರೆಡ್ಡಿ, ಡಿ.ಜೆ.ಚಂದ್ರಮೋಹನ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net