ಕಾಂಗ್ರೆಸ್​ನಿಂದ ಟಿ-ಶರ್ಟ್ ಬಿಡುಗಡೆ

h24-rajat ullagaddimath
Published on

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ. 27ರಂದು ವಾಣಿಜ್ಯ ನಗರಿಯಲ್ಲಿ ಆಯೋಜಿಸಿರುವ ‘ಫ್ರೀಡಂ ಮಾರ್ಚ್’ ಅಭಿಯಾನ ಸಂಬಂಧ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಟಿ-ಶರ್ಟ್ ಬಿಡುಗಡೆ ಮಾಡಲಾಯಿತು.

ಹು-ಧಾ ಮಹಾನಗರ ಸೇವಾದಳದ ಮುಖ್ಯ ಸಂಚಾಲಕ ದೊಡ್ಡರಾಮಪ್ಪ ದೊಡ್ಡಮನಿ ನೇತೃತ್ವದಲ್ಲಿ ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಮಟ್ಟದ ಎಐಸಿಸಿ ಕಾರ್ಯಕ್ರಮದ ಅನುಷ್ಠಾನ ಸಮಿತಿ ಸಭೆ ನಡೆಯಿತು .

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಉಣಕಲ್ ಬ್ಲಾಕ್ ಅಧ್ಯಕ್ಷ ಶರೀಫ ಗರಗದ, ಪಾಲಿಕೆ ಸದಸ್ಯರಾದ ಸುವರ್ಣ ಕಲ್ಲಕುಂಟ್ಲ, ಪ್ರಕಾಶ ಕುರಟ್ಟಿ, ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರು, ಸಂದಿಲ್ ಕುಮಾರ, ಮೋಹನ ಹಿರೇಮನಿ, ಪ್ರಕಾಶ ಕ್ಯಾರಕಟ್ಟಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net