ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ

D.sudhakar dist minister--0002
Published on

ಚಿತ್ರದುರ್ಗ: ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಶಾಸಕರು, ಸಚಿವರು ಅವರ ವೈಯುಕ್ತಿಕ ಅಭಿಪ್ರಾಯಗಳನ್ನು ತಿಳಿಸಿದ್ದು, ಇದನ್ನು ಹೈಕಮಾಂಡ್ ಗಮನಿಸಲಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದಂತೆ ನಮ್ಮಲ್ಲಿ ಒಳ ಜಗಳಗಳಿಲ್ಲ. ಅಧಿಕಾರದಲ್ಲಿದ್ದಾಗ ಸಣ್ಣಪುಟ್ಟ ವ್ಯತ್ಯಾಸಗಳು ಸಾಮಾನ್ಯ ಎಂದರು.

ಸಿಎಂ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಸಂಸದ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಆದ ಅನುಭವ, ಆದ್ದರಿಂದ ಹಾಗೆ ಹೇಳಿದ್ದಾರೆ ಎಂದರು.

ನನಗೆ ಯಾವ ಶಾಸಕರ ಬೆಂಬಲವೂ ಬೇಡ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. 2023ರಲ್ಲಿ ಪಕ್ಷ ಅಧಿ ಕಾರಕ್ಕೆ ಬರಲು ಅವರ ಕೊಡುಗೆ ಇದೆ. ಎಲ್ಲರಿಗೂ ಈ ವಿಚಾರ ಗೊತ್ತಿದೆ. ಸಿಎಂ ಸೇರಿ ಎಲ್ಲರೂ ಅವರ ಜತೆಗೆ ಇದ್ದೇವೆ. ನಾವು 5 ವರ್ಷ ಅಧಿಕಾರದಲ್ಲಿರುತ್ತೇವೆ. ಮುಂದೆ ಕೂಡ ಅಧಿಕಾರಕ್ಕೆ ಬರುತ್ತೇವೆ ಎಂದರು.

ಯಾರು ಶಾಂತಿ ಬಯಸುತ್ತಾರೋ ಅವರು ನಕ್ಸಲರ ಶರಣಾಗತಿ ಸ್ವಾಗತಿಸುತ್ತಾರೆ ಎಂದು ನಕ್ಸಲರಿಗೆ ಸರ್ಕಾರವೇ ಶರಣಾಗಿದೆ ಎಂಬ ಟೀಕೆಗೆ ಉತ್ತರಿಸಿದರು. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೂಲತಃ ಕಾಂಗ್ರೆಸ್ಸಿಗರು. ಬೇಸರದಿಂದ ಬಿಜೆಪಿಗೆ ಹೋಗಿದ್ದಾರೆ. ಪ್ರತಿ ಪಕ್ಷಗಳ ಕೆಲಸ ಮೊಸರಲ್ಲಿ ಕಲ್ಲು ಹುಡುಕುವುದಾಗಿದೆ. ಅದಕ್ಕೆ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

18ರಂದು ಬಾಗಿನ ಅರ್ಪಣೆ: ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಜ.18 ರಂದು ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಅಂದು ಮಧ್ಯಾಹ್ನ 3ಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಪರಿಹಾರ ಕುರಿತ ದೂರು ಕುರಿತು ಪರಿಶೀಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net