ಕಾಂಗ್ರೆಸ್‌ನಿಂದಲೇ ಸಂವಿಧಾನ ತಿದ್ದುಪಡಿ

bkt-4-1
ಬಾಗಲಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಮ್ಮಾನ ಅಭಿಯಾನದ ರಾಜ್ಯ ಸಮಿತಿ ಸದಸ್ಯ, ಬಿಜೆಪಿ ಮುಖಂಡ ಜಗದೀಶ ಹಿರೇಮನಿ ಮಾತನಾಡಿದರು.
Published on

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಇದ್ದಾಗ ಸಂವಿಧಾನವು ಹೆಚ್ಚು ತಿದ್ದುಪಡಿಯಾಗಿದೆ ಎಂದು ಸಂವಿಧಾನ ಸಮ್ಮಾನ ಅಭಿಯಾನದ ರಾಜ್ಯ ಸಮಿತಿ ಸದಸ್ಯ, ಬಿಜೆಪಿ ಮುಖಂಡ ಜಗದೀಶ ಹಿರೇಮನಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ರಚನೆಯಾದ ನಂತರ ಇಲ್ಲಿವರೆಗೂ ೧೦೬ ತಿದ್ದುಪಡಿಗಳು ಆಗಿದ್ದು, ಅದರಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರದಲ್ಲಿದ್ದಾಗ ೭೫, ಕಾಂಗ್ರೆಸೇತರ ಸರ್ಕಾರವಿದ್ದಾಗ ೩೧ ಬಾರಿ ತಿದ್ದುಪಡಿಯಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರವರ ಸಂವಿಧಾನ ಶಿಲ್ಪಿಯಾಗಿದ್ದು, ಸಂವಿಧಾನ ದಿನವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಆಚರಣೆಗೆ ತಂದರು. ಕಾಂಗ್ರೆಸ್ ಪಕ್ಷ ಸ್ವತಂತ್ರ‍್ಯ ಪೂರ್ವದಲ್ಲಿ ಮತ್ತು ನಂತರ ಹೇಗೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಽಯಾಗಿ ಕೆಲಸ ಮಾಡಿದೆ. ಈ ಎಲ್ಲ ಸತ್ಯ ಸಂಗತಿಗಳನ್ನು ತಮ್ಮ ಮುಂದೆವಿಡಲು ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಮತ್ತು ಇತರೆ ದಲಿತ, ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ನ.೨೬ ರಿಂದ ಜ. ೨೬ ವರೆಗೆ ಎರಡು ತಿಂಗಳ ಕಾಲ ರಾಜ್ಯಾದ್ಯಂತ ಸಂವಿಧಾನ ಸಮ್ಮಾನ ಅಭಿಯಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜ.೧೦ ರಂದು ಇಡೀ ದೇಶಾದ್ಯಂತ ೧ ಕೋಟಿ ಜನರು ಸಂವಿಧಾನ ಪೀಠಿಕೆ ಪಠಣ ಮಾಡಲಾಗುವುದು. ಭಾರತದ ಎಲ್ಲ ಪ್ರಜೆಗಳಿಗೆ ಮತದಾನ ಹಕ್ಕು ಕೊಡಬೇಕು ಎಂಬುದು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ವಾದವಾಗಿತ್ತು. ವಾದವನ್ನು ವಿರೋಽಸಿದ್ದು ಕಾಂಗ್ರೆಸ್. ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಮಂಡಿಸಿದರು. ಶೋಷಿತ ವರ್ಗಗಳ ಪರವಾಗಿ ನಿಂತ ಅಂಬೇಡ್ಕರ ಬಗ್ಗೆ ಕಾಂಗ್ರೆಸ್ ಪಕ್ಷ ಅವಮಾನಿಸುವ ಕೆಲಸ ಮಾಡಿದೆ ಎಂದರು.

ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಜಾತಿ ಆಧಾರಿತ ಸವಲತ್ತುಗಳನ್ನು ಕಿತ್ತು ಹಾಕುತ್ತಾರೆ. ಮೀಸಲಾತಿ ರದ್ದು ಪಡಿಸುತ್ತಾರೆ ಮುಂತಾದ ಭಯಗಳನ್ನು ಕಾಂಗ್ರೆಸ್ ಹುಟ್ಟು ಹಾಕಿತ್ತು. ಆದರೆ ದಶಕದ ಆಡಳಿತವನ್ನು ನೋಡಿದ ಮೇಲೆ ಭಯ ಹೋಗಿದೆ. ಪ್ರತಿ ಸಲ ರಾಜ್ಯ ಹಾಗೂ ಲೋಕಸಭಾ ಚುನಾವಣೆಗಳು ಹತ್ತಿರವಾದಗ ಭಯ ಸೃಷ್ಠಿಸಲಾಗುತ್ತದೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮುತ್ತಣ್ಣ ಬೆಣ್ಣೂರ, ಮಲ್ಲಯ್ಯ ಮೂಗನೂರಮಠ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಸುರಪುರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net